ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರು ಹೊರವಲಯದ ಮೂಡಬಿದ್ರೆ ತೋಡಾರು ಪರಿಸರದ ಮಹಿಳೆ ಫಾಲ್ಗುಣಿ ಬಸ್ ನಲ್ಲಿ ಮಂಗಳೂರಿನಿಂದ ತೋಡಾರು ಗೆ ಪ್ರಯಾಣಿಸುತ್ತಿರುವಾಗ 20ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಕಳೆದು ಹೋಗಿತ್ತು.

ಎಷ್ಟೇ ಹುಡುಕಿದರೂ ಸಿಗದೇ ಇದ್ದ ಕಾರಣ, 20ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಕಳೆದು ಹೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಲಾಯಿತು. ಯಾರಿಗಾದರು ಸಿಕ್ಕಿದಲ್ಲಿ ವಾರಸುದಾರರಿಗೆ ನೀಡಲು ಮನವಿ ಮಾಡಲಾಗಿತ್ತು.

ಇದನ್ನ ಗಮನಿಸಿದ ಫಾಲ್ಗುಣಿ ಬಸ್ ಕಂಡಕ್ಟರ್ ಶಾಝಿಲ್, ಬಸ್ ನಲ್ಲಿ ಹುಡುಕಿದ ಸಂದರ್ಭದಲ್ಲಿ ನೆಕ್ಲೆಸ್ ಸಿಕ್ಕಿದ್ದು, ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ತೋಡಾರ್ ನಲ್ಲಿ ಬಸ್ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ವಾರಸುದಾರರು ಅಭಿನಂದಿಸಿದರು.

View this post on Instagram

A post shared by News Karnataka (@newskarnataka)