ಕಡಬ: ಅಣ್ಣನನ್ನು ಬೆನ್ನಟ್ಟಿ ಪೆಟ್ರೋಲ್ ಸುರಿದು ತಮ್ಮ ಬೆಂಕಿ ಹಚ್ಚಿದ ಘಟನೆ ಬಜಕರೆ ಬಳಿ ಕೋಡಿಂಬಾಳ ಕೋರಿಯರ್ ರೈಲ್ವೇ ಟ್ರಾಕ್ ನಲ್ಲಿ ನಡೆದಿದೆ. ಗದಗ ಮೂಲದ ಅಣ್ಣತಮ್ಮಂದಿರು ಎಂಬ ಮಾಹಿತಿ ತಿಳಿದು ಬಂದಿದೆ.
ಸುಟ್ಟು ಕರಕಲಾದ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ನಿಂಗಪ್ಪ ರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗಳೊಂದಿಗೆ ಹನುಮಪ್ಪ ಎಂಬವರು ಆಸ್ಪತ್ರೆಗೆ ದಾಖಲಿಸಲಾಗಿದೆ.

