ಪುತ್ತೂರು: ಬೊಳುವಾರು – ಹಾರಾಡಿ ನಡುವೆ ರಿಕ್ಷಾ ಹಾಗೂ ಬ್ರೇಜಾ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಇನ್ನು ಈ ಘಟನೆಯಲ್ಲಿ ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆ.22ರ ಇಂದು ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ಕೆಎ 21 ಬಿ 8632 ಹಾಗೂ ಪುತ್ತೂರಿನಿಂದ ತೆರಳುತ್ತಿದ್ದ ರಿಕ್ಷಾ ಕೆಎ 21 ಝಡ್ 4852 ನಡುವೆ ಅಪಘಾತ ಸಂಭವಿಸಿದೆ. ಪುತ್ತೂರು ಸಂಚಾರಿ ಪೊಲೀಸರು ಈ ಕುರಿತು ಕೇಸು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

