ಮಂಗಳೂರು: ಕಾಂಗ್ರೆಸ್ MLC ಐವಾನ್ ಡಿ ಸೋಜ ವಿರುದ್ಧ ಕಾನೂನು ಸಮರಕ್ಕೆ ಬಿಜೆಪಿ ಮುಂದಾಗಿದ್ದು, “ಬಾಂಗ್ಲಾ ಮಾದರಿಯಲ್ಲಿ ದಾಳಿ” ಎಚ್ಚರಿಕೆಯನ್ನು ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜಾ ನೀಡಿದ್ದರು. ಐವಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಪಟ್ಟು ಹಿಡಿದು ಹಲವು ರೀತಿಯ ಪ್ರತಿಭಟನೆ ನಡೆಸಿದರು. ಆದರೆ ಈವರೆಗೂ ಬಿಜೆಪಿ ಪ್ರತಿಭಟನೆಗೆ ಪೊಲೀಸ್ ಇಲಾಖೆ ಸ್ಪಂದಿಸಲಿಲ್ಲ. ಈ ಹಿನ್ನಲೆ ಕಾನೂನು ಸಮರಕ್ಕೆ ಬಿಜೆಪಿ ಶಾಸಕ ಮುಂದಾಗಿದ್ದಾರೆ.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯಿಂದ ಕಾನೂನು ಹೋರಾಟದ ಸೂಚನೆ ನೀಡಿದ್ದಾರೆ. ಐವಾನ್ ಡಿ ಸೋಜ ವಿರುದ್ಧ ಕೇಸ್ ಹಾಕದೆ ಹೋದರೆ ಕಾನೂನು ಹೋರಾಟ ನಡೆಸುತ್ತೇವೆ. ಕಾನೂನು ಹೋರಾಟವೊಂದೇ ನಮ್ಮ ಮುಂದಿರುವ ದಾರಿ.  ಇಷ್ಟು ದಿನ ಅಸಹಾಯಕತೆ ತೋರಿಸಿದ ಪೊಲೀಸರು, ಇನ್ನೂ ಮುಂದೆಯಾದರೂ ಗಟ್ಸ್ ತೋರಿಸುತ್ತಾರೆ ಎಂದು ನೋಡುತ್ತೇವೆ. ಐವನ್ ಡಿ ಸೋಜ ರಾಷ್ಟ್ರದ್ರೋಹದ ಹೇಳಿಕೆ ನೀಡಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ನಮಗೆ ಯಾರು ದೂರು ನೀಡಲಿಲ್ಲ ಎಂದು ಹೇಳಿದ್ದಾರೆ.

ಆದರೆ ಇದು ಸಣ್ಣ ಕೇಸ್ ಅಲ್ಲ ರಾಷ್ಟ್ರ ದ್ರೋಹದ ಕೇಸ್ ಕಾಂಗ್ರೆಸ್ ನವರ ವಿರುದ್ಧ ಯಾವುದೇ ಕೇಸ್ ಹಾಕುವ ಧೈರ್ಯ ಛಲಗಾರಿಕೆ ಪೊಲೀಸ್ ಇಲಾಖೆಗೆ ಇಲ್ಲ. ಆದರೆ ನಮಗೆಲ್ಲ ನಡುರಾತ್ರಿಯೊಳಗೆ ಕೇಸ್ ಹಾಕಿದ್ದಾರೆ. ಕೇವಲ ಸಿದ್ದರಾಮಯ್ಯಗೆ ಬಕೆಟ್ ಹಿಡಿಯುವ ಉದ್ದೇಶದಿಂದ ಐವಾನ್ ಡಿ ಸೋಜ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ ಎಂದರು.