ಮೈಸೂರು : ಜಮ್ಮು ಕಾಶ್ಮೀರ ಭಯೋತ್ಪಾದಕ ದಾಳಿ ಖಂಡಿಸಿ ಮೈಸೂರು ನಗರ ಬಿಜೆಪಿಯಿಂದ ಮೇಣದ ಬತ್ತಿ ಮೌನ ಮೆರವಣಿಗೆ ನಡೆಸಲಾಯಿತು.
ಮೈಸೂರು ನ್ಯಾಯಾಲಯದ ಮುಂಭಾಗ ಗಾಂಧಿ ಪ್ರತಿಮೆ ಬಳಿಯಿಂದ ಜಾಥ ಹಮ್ಮಿಕೊಂಡಿದ್ದು, ಮಾಜಿ ಶಾಸಕ ಎಲ್ ನಾಗೇಂದ್ರ ನೇತೃತ್ವದಲ್ಲಿ ಮೈಸೂರಿನ ಪ್ರಮುಖ ರಸ್ತೆಯಲ್ಲಿ ಜಾಥ ನಡೆಸಲಾಯಿತು. ಮೇಣದ ಬತ್ತಿ ಜಾಥದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

