ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆ ಹಿನ್ನೆಲೆ ಜಿಲ್ಲೆಗೆ ಕಾಂಗ್ರೆಸ್ ನಿಯೋಗ ಹಾಗೂ ಬಿಜೆಪಿ ನಿಯೋಗ ಆಗಮಿಸಿದೆ. ವಿವಿಧ ಧಾರ್ಮಿಕ ಮುಖಂಡರ ಅಭಿಪ್ರಾಯವನ್ನ ಸಂಗ್ರಹಿಸಿದ್ದಾರೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಮಂಗಳೂರಲ್ಲಿ ಕಾಂಗ್ರೆಸ್ ಮುಖಂಡ ಪದ್ಮರಾಜ್ ಹೇಳಿಕೆ ನೀಡಿದ್ದಾರೆ.

ಬಿಜೆಪಿಗೆ ದ.ಕ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಅಗತ್ಯವಿಲ್ಲ. ಉಸ್ತುವಾರಿ ಸಚಿವರು ಪ್ರವಾಸೋದ್ಯಮಕ್ಕೆ ಅದ್ಯತೆ ನೀಡಿದ್ದಾರೆ. ಮಂಗಳೂರಲ್ಲಿ ಟಾಸ್ಕ್ ಫೋರ್ಸ್ ಈಗಾಗಲೇ ರಚನೆಯಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಕೈ ಜೋಡಿಸಬೇಕು. ಅಶಾಂತಿಗೆ ಬಿಜೆಪಿ ಪಕ್ಷಕ್ಕೆ ನಾಯಕರೇ ಕಾರಣ. ಪ್ರಚೋದನಕಾರಿ ಮಾತುಗಳಿಂದ ಅಶಾಂತಿ ಸೃಷ್ಟಿಯಾಗಿದೆ.

ಬಿಜೆಪಿಗೆ ಕಾಮನ್ ಸೆನ್ಸ್ ಇದ್ರೆ ನಾಯಕರಿಗೆ ಪ್ರಚೋದನಕಾರಿ ಮಾತನಾಡದಂತೆ ಸೂಚನೆ ನೀಡಬಹುದಿತ್ತು. ಅಂತಹ ಹೇಳಿಕೆಯನ್ನ ನೀಡುವ ಕೆಲಸ ಬಿಜೆಪಿ ಮಾಡಿಲ್ಲ. ದ.ಕ ಸಂಸದ ಚೌಟರಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದೇ ಇಲ್ಲ. ಹೆದ್ದಾರಿ ಸಮಸ್ಯೆ , ರೈಲ್ವೆ ಅಭಿವೃದ್ಧಿ ಕಾಮಗಾರಿಗೆ ಏನೆಲ್ಲ ಯೋಜನೆ ತಂದಿದ್ದಾರೆ ಸಂಸದರು? ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ವಿರುದ್ದ ಪದ್ಮರಾಜ್ ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕರು ಪೊಲೀಸರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ದ.ಕ.ಜಿಲ್ಲಾ ಎಸ್ಪಿ ಕಾಂಗ್ರೆಸ್ ಕಾರ್ಯಕರ್ತರಾಗಿ ವರ್ತನೆ ಎಂಬ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ರಹ್ಮಾನ್ ಹತ್ಯೆ ಬಗ್ಗೆ ಪೊಲೀಸರು ಸ್ಪಷ್ಟ ಮಾಹಿತಿ ಕೊಟ್ಟಿಲ್ಲ ಎಂಬ ಆರೋಪ ಇದೆ. ಈ‌ ಕುರಿತು ತನಿಖೆ ಹಂತದಲ್ಲಿದೆ ಎಂದು ಮಂಗಳೂರಿನ ‌ಮಲ್ಲಿಕಟ್ಟೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಹೇಳಿಕೆ ನೀಡಿದ್ದಾರೆ.