ಮಂಗಳೂರು : ಎಸ್ ಐ ಆರ್ ಜನಜಾಗೃತಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಭಾಷಣ ಮಾಡಿ, ಎಸ್ ಐ ಆರ್ ಮೂಲಕ ಬಿಜೆಪಿ ಮತ್ತು ಆರ್ ಎಸ್ ಎಸ್ ನೈಜ ಮತದಾರರನ್ನು ಕೈ ಬಿಡಲು ಪ್ರಯತ್ನಿಸುತ್ತಿದೆ. ಪ್ರತೀ ವರ್ಷ ಜನವರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತಿತ್ತು.

೨೦೧೩ ರಲ್ಲಿ ಮತದಾರರ ಪರಿಷ್ಕರಣೆ ಕೊನೆಯದಾಗಿ ಆಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಯಾರಿಗೂ ಮತ ಚಲಾಯಿಸುವ ಹಕ್ಕಿರಲಿಲ್ಲ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ವನ್ನು ಕಾಂಗ್ರೆಸ್ ಜಾರಿ ಮಾಡಿತ್ತು. ಎಸ್ ಐ ಆರ್ ನಿಂದ ಕಾಂಗ್ರೆಸ್ ನ ಬೆಂಬಲಿಗರನ್ನು ಕಟ್ ಮಾಡೋಕೆ ಬಿಜೆಪಿ ನೋಡುತ್ತಿದೆ. ಆರ್ ಎಸ್ ಎಸ್ ಮತ್ತು ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದೆ.

ಈ ದೇಶ ಕಟ್ಟಿರೋದು ಕಾಂಗ್ರೆಸ್ ಪಕ್ಷದವರು. ಬಿಜೆಪಿ ಷಡ್ಯಂತ್ರ ವಿರುದ್ಧ ಸ್ವತಂತ್ರ ಹೋರಾಟದ ಮಾದರಿ ಕೆಲಸ ಮಾಡಬೇಕು. ನಾವೀಗ ಕವಲುದಾರಿಯಲ್ಲಿದ್ದೇವೆ, ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಬಂಗಾಳ ಚುನಾವಣೆಯ ಉಸ್ತುವಾರಿ ವಹಿಸಿದ್ದೇವೆ. ೨೭ ಲಕ್ಷ ಮತದಾರರನ್ನು ಅನುಮಾನಸ್ಪದ ಅಂತಾ ಹಕ್ಕು ನೀಡಿರಲಿಲ್ಲ. ಬಿಜೆಪಿ ಗೆ ಸಂವಿಧಾನ,ತ್ರಿವರ್ಣ ಧ್ವಜದ ಮೇಲೆ ನಂಬಿಕೆ ಇಲ್ಲ ಎಂದರು.

ಫೇಕ್ ಸರ್ಟಿಫಿಕೇಟ್ ಇಟ್ಟ ವ್ಯಕ್ತಿ ಪ್ರಧಾನಿಯಾಗಬಹುದು. ನೈಜ ದಾಖಲೆ ಇದ್ದ ವ್ಯಕ್ತಿ ಮತದಾನ ಮಾಡಬಾರದಾ?. ಎಸ್ ಐ ಆರ್ ಮೂಲಕ‌ ನಕಲಿ ಮತದಾರರನ್ನು ತೆಗೆಯಿರಿ. ಹೆಚ್ಚಿನ ನಕಲಿಗಳು ಇರೋದು ಬಿಜೆಪಿ ಮತ್ತು ಆರ್ ಎಸ್ ಎಸ್ ನಲ್ಲೇ. ಕಾಂಗ್ರೆಸ್ ಪಕ್ಷವನ್ನು ಮೂರ್ಖರು ಮಾಡಬಹುದು. ಆದರೆ ಕಾಂಗ್ರೆಸ್ ನ ಪ್ರಭುತ್ವ ಜನರನ್ನು ಮೂರ್ಖರು ಮಾಡೋಕೆ ಆಗಲ್ಲ ಎಂದರು.