ಮಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಿರುವ ಕರಾವಳಿ ಕರ್ನಾಟಕದಲ್ಲಿ ಗುಣಮಟ್ಟ ಹಾಗೂ ಪಾರದರ್ಶಕ ವ್ಯವಹಾರ, ಆಧುನಿಕ ತಂತ್ರಜ್ಞಾನಗಳೊಂದಿಗೆ ಹೆಸರಾಗಿರುವ ರೋಹನ್ ಕಾರ್ಪೊರೇಶನ್ ನೂತನ ವಸತಿ ಸಮುಚ್ಚಯ ರೋಹನ್ ಗಾರ್ಡನ್ ನ ಭೂಮಿ ಪೂಜೆ ಕಾರ್ಯಕ್ರಮ ಮಂಗಳೂರಿನ ಕದ್ರಿ-ಶಿವಬಾಗ್‌ನಲ್ಲಿ ನೆರವೇರಿತು.

ನೂತನ ವಸತಿ ಸಮುಚ್ಚಯದ ಭೂಮಿ ಪೂಜೆಯನ್ನು ಬೆಂದೂರು ಚರ್ಚ್‌ನ ಧರ್ಮಗುರು ಫಾ. ವಾಲ್ಟರ್ ಡಿ’ಸೋಜಾ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಈ ವೇಳೆ ರೋಹನ್ ಕಾರ್ಪೊರೇಷನ್‌ನ ಅಧ್ಯಕ್ಷ ರೋಹನ್ ಮೊಂತೇರೊ ಮಾತನಾಡಿ, ‘ಕದ್ರಿ-ಶಿವಬಾಗ್ ಪ್ರದೇಶದಲ್ಲಿ ಆಧುನಿಕ ವ್ಯವಸ್ಥೆಗಳೊಂದಿಗೆ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ. ರೋಹನ್ ಗಾರ್ಡನ್ ಐಷಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸ ವ್ಯವಸ್ಥೆಯನ್ನು ಒದಗಿಸುವ ಆಧುನಿಕ ವಸತಿ ಸಮುಚ್ಚಯ. ಶಾಂತ, ಹಸಿರು ಪರಿಸರದ ಅನುಭವ ನೀಡಲಿದೆ. ಐದು ಅಂತಸ್ತುಗಳ ಕಟ್ಟಡದಲ್ಲಿ ೨೮ ಅಪಾರ್ಟ್‌ಮೆಂಟ್‌ಗಳಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ೧,೧೦೫ ರಿಂದ ೧,೫೫೦ ಚದರ ಅಡಿಗಳ ೨ ಮತ್ತು ೩ ಬಿ.ಎಚ್.ಕೆ ಅಪಾರ್ಟ್‌ಮೆಂಟ್‌ಗಳನ್ನು ಯೋಜನೆ ಒಳಗೊಂಡಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್‌ ಸಮೂಹ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎಸ್‌ಸಿಡಿಸಿಸಿ ಬ್ಯಾಂಕ್ ನಿದೇಶಕರಾದ ದೇವಿಪ್ರಸಾದ್ ಶೆಟ್ಟಿ, ಶಶಿಕುಮಾರ್ ರೈ, ಮೇಘರಾಜ್, ಪಾಲಿಕೆಯ ಮಾಜಿ ಸದಸ್ಯ ನವೀನ್ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.