ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆ (FMCI) ವತಿಯಿಂದ ‘ವಿಶ್ವ ಮಧುಮೇಹ ದಿನ’ದ ಅಂಗವಾಗಿ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.

“ಭಾರತವು ‘ಮಧುಮೇಹ ರಾಜಧಾನಿ’ ಎಂದು ಕರೆಯಲ್ಪಡುವಂತಾಗಿದೆ ಎಂಬುದು ಕಳವಳಕಾರಿ. ವಯಸ್ಸಾದಂತೆ ಮಧುಮೇಹ ಬರುವುದು ಸಹಜ ಎಂಬ ತಪ್ಪು ಕಲ್ಪನೆ ಇದೆ, ಆದರೆ ಆಹಾರ ನಿಯಂತ್ರಣ, ವ್ಯಾಯಾಮ ಮತ್ತು ಆರಂಭಿಕ ಪತ್ತೆ ಮೂಲಕ ರೋಗವನ್ನು ತಡೆಗಟ್ಟಬಹುದು,” ಎಂದು ಹೇಳಿದರು.

ಅಭಿಯಾನದ ಪ್ರಮುಖ ಅಂಗವಾಗಿ ‘ಅರಿವಿಗಾಗಿ ಹೆಜ್ಜೆಗಳು’ ಎಂಬ ಶೀರ್ಷಿಕೆಯಡಿ ನ.5ರಿಂದ 14ರವರೆಗೆ ನಡೆಯುವ 10 ದಿನಗಳ ದೈಹಿಕ ಚಟುವಟಿಕೆ ಅಭಿಯಾನ ಆರಂಭಗೊಂಡಿದ್ದು ಈಗಾಗಲೇ 400ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ನ.14-15ರಂದು ಸಂಸ್ಥೆಯ ಕಟ್ಟಡಕ್ಕೆ ಮಧುಮೇಹ ಜಾಗೃತಿಯ ಸಂಕೇತವಾಗಿ ನೀಲಿ ಬೆಳಕು ಅಲಂಕಾರ ಮಾಡಲಾಗಿದೆ. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಆರೋಗ್ಯ ತಪಾಸಣೆ ಮತ್ತು ಉಪನ್ಯಾಸಗಳು, ಜಾಗೃತಿ ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ.

ಮಧುಮೇಹ ಮತ್ತು ಸಂಸ್ಥೆ: ಅರಿವೂ ಇರಲಿ, ಆಚರಣೆಯೂ ಇರಲಿ” ವಿಷಯದಡಿ ವಿದ್ಯಾರ್ಥಿಗಳಿಗಾಗಿ ಬುಕ್‌ಮಾರ್ಕ್ ವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತ ವಿನ್ಯಾಸವನ್ನು ಹೆಚ್ಚು ಮುದ್ರಿಸಲಾಗುವುದು. ನ.15ರಂದು ಸಮಾರೋಪ ಸಮಾರಂಭ ನಡೆಯಲಿದೆ. “ಮಧುಮೇಹ ಸ್ನೇಹಿ ಆಹಾರ ತಯಾರಿಕೆ” ಮತ್ತು “ಕೆಲಸದ ಸ್ಥಳದಲ್ಲಿ ಸಕ್ರಿಯವಾಗಿರುವುದು” ಕುರಿತ ಉಪನ್ಯಾಸಗಳು, ಬಳಿಕ ಬಹುಮಾನ ವಿತರಣೆ ನಡೆಯಲಿದೆ.

ಮಕ್ಕಳ ದಿನಾಚರಣೆಗೆ ಫಾದರ್ ಮುಲ್ಲರ್ ಸಂಸ್ಥೆಗಳಿಂದ ವಿಶೇಷ ಕಾರ್ಯಕ್ರಮಗಳು

ಮಕ್ಕಳ ದಿನಾಚರಣೆಯ ಅಂಗವಾಗಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಹಾಗೂ ವಾಕ್ ಮತ್ತು ಶ್ರವಣ ಕಾಲೇಜುಗಳು ಜಂಟಿಯಾಗಿ ನವೆಂಬರ್ 13ರಂದು ಬಜಾಲ್‌ನ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿವೆ. ಆಟಗಳು, ಚಿತ್ರಕಲೆ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕೇಕ್ ಕತ್ತರಿಕೆ, ಉಪಹಾರ ವಿತರಣೆ ನಡೆಯಲಿದೆ.

ನವೆಂಬರ್ 15ರಂದು ಆಸ್ಪತ್ರೆ ಸಮ್ಮೇಳನ ಸಭಾಂಗಣದಲ್ಲಿ ಹೊರರೋಗಿಗಳು, ಒಳರೋಗಿಗಳು ಮತ್ತು ಸಿಬ್ಬಂದಿ ಮಕ್ಕಳಿಗಾಗಿ ಚಿತ್ರಕಲೆ, ಫ್ಯಾನ್ಸಿ ಡ್ರೆಸ್, ರೀಲ್ ತಯಾರಿಕೆ ಹಾಗೂ ಮ್ಯಾಜಿಕ್ ಪ್ರದರ್ಶನ ನಡೆಯಲಿದೆ.

‘ಎಕ್ಸ್‌ಪ್ಲೋರಾ 2025’ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ

ಕಂಕನಾಡಿಯ ಫಾದ‌ರ್ ಮಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ (FMHMC) ವತಿಯಿಂದ, ಗ್ಲೋಬಲ್ ಹೋಮಿಯೋಪ ಫೌಂಡೇಶನ್ (GHF) ಹಾಗೂ ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಮಿಯೋಪಥಿ (CCRH) ಸಹಯೋಗದಲ್ಲಿ “ಎಕ್ಸ್‌ಪ್ಲೋರಾ 2025 – ಹೋಮಿಯೋಪಥಿಕ್ ಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆಗಳ ಏಕೀಕರಣ” ಎಂಬ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವು ನವೆಂಬರ್ 14ರಿಂದ 16ರವರೆಗೆ ಫಾದರ್ ಮಲ್ಲರ್ ಕನ್ವೆನ್ಸನ್ ಸೆಂಟರ್, ಕಂಕನಾಡಿಯಲ್ಲಿ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ರೆವ. ಫಾ. ಕೌಸ್ಪಿನ್ ಲ್ಯೂಕಾಸ್ ಲೋಬೊ (ನಿರ್ದೇಶಕ, ಫಾದರ್ ಮಲ್ಲರ್ ಸೇವಾ ಸಂಸ್ಥೆಗಳು) ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಮಲಾ ಬಾಯಿ ಬಿ. (KAS), ಮುಖ್ಯ ಆಡಳಿತಾಧಿಕಾರಿ, ಆಯುಷ್ ಇಲಾಖೆ, ಹಾಗೂ ಡಾ. ಅಶ್ಲೇ ರಾಸ್ (ಡರ್ಬನ್ ತಂತ್ರಜ್ಞಾನ ವಿಶ್ವವಿದ್ಯಾಲಯ, ದಕ್ಷಿಣ ಆಫ್ರಿಕಾ) ಮತ್ತು ಡಾ. ಕಿಮ್ ಅಂಥೋನಿ ಜಾಬ್ (ಯುಕೆ) ಉಪಸ್ಥಿತರಿರಲಿದ್ದಾರೆ.

ಡಾ. ಆಶಾ ಕಿರಣ್ (ಆಸ್ಟ್ರೇಲಿಯಾ), ಡಾ. ನಿಕೋಲಾ ಕುಟಿನ್ತೋ (ಜರ್ಮನಿ) ಸೇರಿದಂತೆ ಭಾರತದ ಮತ್ತು ವಿದೇಶಗಳ 24ಕ್ಕೂ ಹೆಚ್ಚು ಪರಿಣಿತರ ಭಾಗವಹಿಸುವರು. ದೇಶದಾದ್ಯಂತದಿಂದ 1500ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದ ಪ್ರಮುಖ ಅಂಶಗಳಲ್ಲಿ OSCE ಪ್ರಾಯೋಗಿಕ ತರಬೇತಿ (ಹೋಮಿಯೋಪಥಿಯ ಮೂರು ವಿಷಯಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆ), ಸಂಶೋಧನಾ ಪತ್ರಿಕೆ ಮತ್ತು ಪೋಸ್ಟರ್ ಸ್ಪರ್ಧೆಗಳು, ಹಾಗೂ ಎಕ್ಸ್‌ ಪ್ಲೋರಾ ಫೋಕನ್ – ಪರಿಣಿತರೊಂದಿಗೆ ನೇರ ಸಂವಾದ ವೇದಿಕೆ ಒಳಗೊಂಡಿವೆ.

ಸಮ್ಮೇಳನದ ವೇಳೆ “ಕ್ರೇನಿಯಂ” (ಆಸ್ಪತ್ರೆಯ ಮಾಹಿತಿ ನಿರ್ವಹಣಾ ಸಾಫ್ಟ್‌ವೇರ್), “ಪಯೋನೀರ್ 2025″ (ವಾರ್ಷಿಕ ಕಾಲೇಜು ನಿಯತಕಾಲಿಕೆ), ಮತ್ತು “ಸಂಶೋಧನಾ ಬುಲೆಟಿನ್ 2025” (ಸಂಶೋಧನಾ ಯೋಜನೆಗಳ ಸಂಕಲನ) ಬಿಡುಗಡೆ ಮಾಡಲಾಗುತ್ತದೆ. ಎಂದು ಫೌಟಿಸ್ ಲುಕಾಸ್ ಲೋಬೊ ಹೇಳಿದರು.