ಮಂಗಳೂರು: ಮಂಗಳೂರು: ಕರಾವಳಿಯಲ್ಲಿ ಸಂಚಲನ ಉಂಟು ಮಾಡಿದ ಪಾಲಿಟಿಕ್ಸ್ ಆಡಿಯೋ.ಹೌದು. . .ಅರುಣ್ ಕುಮಾರ್ ಪುತ್ತಿಲರದ್ದು ಎನ್ನಲಾದ ಅಡಿಯೋ ಒಂದು ಫುಲ್ ವೈರಲ್ ಆಗ್ತಿದೆ.

ಬಿಜೆಪಿ ಮುಖಂಡೆಯೊಬ್ಬರ ಬಳಿ ಮಾತನಾಡಿರೋ ಆಡಿಯೋ ವೈರಲ್ ಆಗುತ್ತಿದೆ. ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಅಂತಾ ಮಹಿಳೆಯೊಬ್ಬರು ಕರೆಯಲ್ಲಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅರುಣ್‌ ಪುತ್ತಿಲ ಅವರು, ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ. ಅದೆಲ್ಲಾ ಬಿಟ್ಟವರೇ ಪೊಲಿಟೀಶಿಯನ್.ಮಾನ ಮರ್ಯಾಧೆ ಎರಡು ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾದ್ಯವಿಲ್ಲ. ಅದನ್ನು ಬಿಟ್ಟು ಪರಿವಾರದ ಜನ ದೊಡ್ಡವರಾಗಿದ್ದು ಎಂದಿದ್ದಾರೆ.

ಇನ್ನು 3.5 ಕೋಟಿ ಹಣ ಪಡೆದಿದ್ದಾರೆ ಅನ್ನೊ ಬಗ್ಗೆ ಕೂಡ ಆಡಿಯೋದಲ್ಲಿ ಪ್ರಸ್ತಾಪವಾಗಿದೆ..’ಸೌಶಯಾತ್ಮಾವೀ ಇನಶ್ಯತೀ’ ಎಂಬ ಸಂಸ್ಕೃತ ಶ್ಲೋಕ ವನ್ನು ಮಹಿಳೆ ಹೇಳಿದ್ದಾರೆ. ಅಂದರೆ ನೀವು ನಾಶ ಆದ್ರಿ ಎಂಬರ್ಥ. ಈ ಮೂಲಕ ಹಣ ತೆಗೆದುಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಪುತ್ತಿಲ ಒಪ್ಪಿಕೊಂಡಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಒಂಟಿಯಾಗಿ ಸಿಕ್ಕಗ ಮಾತನಾಡುತ್ತೇನೆ ಎಂದ ಮಹಿಳೆ ಆಡಿಯೋ ರೆಕಾರ್ಡ್ ಮಾಡಿ ನಿಮಗೆ ಇವತ್ತು ಕಡ್ಡಿ ಇಟ್ಟಿದ್ದೇನೆ ಎಂದಿದ್ದಾರೆ.