ಮಂಗಳೂರು: ನಗರದ ತಾತಾವು ರಸ್ತೆಯಲ್ಲಿ ವೈಜ್ಞಾನಿಕ ಕಾಮಗಾರಿಯಿಂದಾಗಿ ಕೃತಕ ನೆರೆ ಸಂಭವಿಸಿದೆ. ಹಲವಾರು ವರ್ಷಗಳಿಂದ ವಾಸವಾಗಿರುವ ಅಲ್ಲಿನ ನಿವಾಸಿಗಳಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಈಗ ಈ ರಸ್ತೆ ಕಾಮಗಾರಿ ಹಾಗೂ ಹರಿಯುವ ಮಳೆ ಹರಿಯಲು ಚರಂಡಿ ಮಾಡಿರೋದು ಎತ್ತರ ಆಗಿರೋದರಿಂದ ಸಮಸ್ಯೆ ಎದುರಾಗಿದೆ.

ಮಳೆ ಬರುವಾಗ ಮನೆಯಲ್ಲಿ ಯಾರಾದರೂ ಇರಲೇ ಬೇಕಾಗುತ್ತದೆ ಎಂದು ಸಂತ್ರಸ್ಥರಾದ ವಿಜಯ್ ರವರು ಹೇಳುತ್ತಾರೆ. ಇನ್ನು ಇದು ಶಾಶ್ವತ ಆಗಿರೋದರಿಂದ ಇದನ್ನು ತೆರವು ಮಾಡಿ ಈ ಹಿಂದೆ ಇರುವ ರೀತಿ (ಅಂದರೆ ಎರಡು ಆಡಿ ಕೆಳಗೆ ) ಮಾಡಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ. ಈ ಹಿಂದೆ ಸ್ಥಳೀಯ ಮ. ನ. ಪ. ಸದಸ್ಯರಿಗೆ ಹಾಗೂ ಮ. ನ. ಪ. ಅಧಿಕಾರಿಗಳಿಗೆ ಗಮನಕ್ಕೂ ತಂದರು ಕ್ಯಾರೇ ಅನ್ನುತ್ತಿಲ್ಲ ಎಂದರು.