ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಲವಾರು ಪ್ರದರ್ಶಿಸಿದ ಘಟನೆ ದ‌‌.ಕ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾನೂನಿಗೆ ಧಕ್ಕೆ ತರುವಂತೆ ತಲವಾರು ಪ್ರದರ್ಶಿಸಿ ದರ್ಪ ಮೆರೆದಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪ ಕೇಳಿಬಂದಿದೆ. ಪುತ್ತೂರು ತಾಲೂಕು ಕುರಿಯ ಗ್ರಾಮದ ನಿವಾಸಿ ಸುಜಿತ್ (36) ಹಾಗೂ ಆರ್ಯಾಪು ಗ್ರಾಮದ ನಿವಾಸಿ ಪುಟ್ಟಣ್ಣ (32) ಬಂಧಿತರು. ಬಿಎನ್ ಎಸ್ 25(1B)(B) Arms Act 1959 & ಕಲಂ 270,3(5) ಬಿಎನ್‌ಎಸ್‌ 2023 ರಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.