ಮಂಗಳೂರು: ರೋಟರಿ ಜಿಲ್ಲಾ 3181 ರ ಆಡಳಿತ ಸಮಿತಿಯ ಅಶ್ರಯದಲ್ಲಿ ರೋಟರಿ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರಧಾನ “ಜೈತ್ರ ಯಾತ್ರಾ– 2024” ಸಮಾರಂಭವು ರೋಟರಿ ಜಿಲ್ಲಾ 3181 ರ ಗವರ್ನರ್‍ರಾದ ರೋ! ಕೇಶವ್ ನೇತೃತ್ವದಲ್ಲಿ ಮತ್ತು ಅಧ್ಯಕ್ಷತೆಯಲ್ಲಿ ಮೈಸೂರ್ ನಗರದ ಮೈಸೂರ್ ಯುನಿಯನ್ ಸಭಾಂಗಣದಲ್ಲಿ ಜು. 08 ರಂದು ಜರಗಿತು.
ಸುಮಾರು 800 ರೋಟರಿ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯು ಪ್ರಸ್ತುತ ಸಾಲಿನಲ್ಲಿ ಸಲ್ಲಿಸಿದ ಶ್ರೇಷ್ಠ ಜನಪರ ಸೇವೆ ಮತ್ತು ಸಾಧಿಸಿದ ಶ್ರೆಷ್ಠ ಸಾಧನೆಯನ್ನು ಪರಿಗಣಿಸಿ ರೋಟರಿಯ ಅತ್ಯುನ್ನತ ಪ್ರಶಸ್ತಿಯಾದ ಪ್ಲಾಟಿನಂ ಪ್ಲಸ್ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.
ಸಂಸ್ಥೆಯು ಸಂಸ್ಥೆ ಸೇವೆ, ಸಮುದಾಯ ಸೇವೆ, ವೃತ್ತಿಪರ ಸೇವೆ, ಅಂತರಾಷ್ಟ್ರೀಯ ಸೇವೆ ಹಾಗೂ ರೋಟರಿ ಜಿಲ್ಲಾ ಸಮಿತಿಯು ಹಮ್ಮಿಕೊಂಡ ವಿವಿಧ ಯೋಜನೆಗಳಾದ , ವಿದ್ಯಾರ್ಥಿ ವೇತನ ವಿತರಣೆ, ಕುಡಿಯುವ ನೀರಿನ ಯೋಜನೆ , ಆರೋಗ್ಯ, ತಪಾಸಣೆ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್ ರೈ, ಕಾರ್ಯದರ್ಶಿರಾದ ಗಣೇಶ್ ರವರಿಗೆ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕಾರತ್ ರವರು ಹಾಗೂ ಮುಖ್ಯ ಅಥಿತಿಯಾಗಿದ ಚಲನಚಿತ್ರ ನಟಿ ಶ್ರೀಮತಿ ಪ್ರಿಯಾಂಕ ಪ್ರಧಾನ ಮಾಡಿ ಅಭಿನಂದಿಸಿದರು.
ವೇದಿಕೆಯಲ್ಲಿ ಸಹಾಯಕ ಗವರ್ನರ್ ರಾದ ಪಿ.ಡಿ.ಶೆಟ್ಟಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ! ರಂಜನ್ , ಪದಾಧಿಕಾರಿಗಳಾದ ಕೆನ್ಯೂಟ್ ಪಿಂಟೋ , ಸುಮಿತ್ ರಾವ್, ನಿತಿನ್, ಸಂಸ್ಥೆಯ ಸಲಹೆಗಾರರದ ರಾಜೇಂದ್ರ ಕಲ್ಭಾವಿ ಉಪಸ್ಥಿತರಿದ್ದರು.

