Bengaluru 22°C
Ad

ಅನಂತಪದ್ಮನಾಭ ದೇಗುಲಕ್ಕೆ ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ ತೋಡ್ತಿಲ್ಲಾಯ ಆಯ್ಕೆ

Satyanarayn

ಬೆಳ್ತಂಗಡಿ: ಕೇರಳದ ಅತ್ಯಂತ ಪ್ರಾಚೀನ ಹಾಗೂ ವಿಶ್ವದ ಅತ್ಯಂತ ಸಿರಿವಂತ ದೇಗುಲಗಳ ಪೈಕಿ ಒಂದಾದ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕಗೊಂಡು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.

 ಸತ್ಯನಾರಾಯಣ ತೋಡ್ತಿಲ್ಲಾಯ ಇವರು  ಕೊಕ್ಕಡ ಗ್ರಾಮದ ಅಡ್ಡೈ ಸುಬ್ರಾಯ ತೋಡ್ತಿಲ್ಲಾಯ ಮತ್ತು ಯಶೋಧಾ ದಂಪತಿಯ ದ್ವಿತೀಯ ಪುತ್ರ. ಕೊಕ್ಕಡ, ನೆಲ್ಯಾಡಿ, ಉಪ್ಪಿನಂಗಡಿಯ ಶಾಲಾ ಕಾಲೇಜುಗಳ ಹಳೇ ವಿದ್ಯಾರ್ಥಿಯಾಗಿದ್ದು ಸತೀಶ ಯಡಪಡಿತ್ತಾಯರ ಬಳಿ ವೇದಾಧ್ಯಯನ ನಡೆಸಿ ಬೆಂಗಳೂರಿನಲ್ಲಿ ವೈದಿಕ ವಿದ್ವಾಂಸರಾಗಿದ್ದರು. ಅನಂತ ಪದ್ಮನಾಭ ದೇವಸ್ಥಾನ 8ನೇ ಶತಮಾನದಲ್ಲಿ ಸ್ಥಾಪಿತವಾದ 108 ವಿಷ್ಣು ದೇವಾಲಯಗಳ ಪೈಕಿ ಒಂದಾಗಿದೆ.

Ad
Ad
Nk Channel Final 21 09 2023
Ad