ಮಂಗಳೂರು: ಕಬ್ಬಿಣದ ರಾಡ್ ಎದೆಯೊಳಗೆ ಹೊಕ್ಕು ತೀರ ಗಂಭೀರ ಸ್ಥಿತಿಯಲ್ಲಿದ್ದ ಕಾಸರಗೋಡಿನ 11 ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ವೈದ್ಯರ ತಂಡ ಯಶಸ್ವಿಯಾಗಿದೆ.
ಜನವರಿ 18, 2026 ರಂದು ಬಾಲಕಿ ಶ್ರೀನಾ (ಹೆಸರು ಬದಲಾಯಿಸಲಾಗಿದೆ) ಆಟವಾಡುವಾಗ ಕಬ್ಬಿಣದ ರಾಡ್‌ಮೇಲೆ ಬಾಲಕಿ ಆಕಸ್ಮಿಕವಾಗಿ ಬಿದ್ದಿದ್ದು ರಾಡ್‌ಬಾಲಕಿಯ ಎದೆಯ ಬಲಭಾಗದಲ್ಲಿ ಮುಂದೆಯಿಂದ ಹೊಕ್ಕಿ ಹಿಂಬದಿಯಿಂದ ಹೊರಬಂದಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ಪೋಷಕರು ಬಾಲಕಿಯನ್ನು ಕರೆದೊಯ್ದಿದ್ದು ವೈದ್ಯರು ಸೂಕ್ತವಾದ ಪ್ರಾಥಮಿಕ ಚಿಕಿತ್ಸೆ ನೀಡಿ ಸಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.

ಕೆಎಂಸಿ ಆಸ್ಪತ್ರೆ ತುರ್ತು ಚಿಕಿತ್ಸಾ ತಜ್ಞೆ ಡಾ. ಅರ್ಪಿತಾ ಮತ್ತವರ ತಂಡ ತಕ್ಷಣ ಬಾಲಕಿಯ ಸ್ಥಿತಿಯನ್ನು ಸ್ಥಿರಗೊಳಿಸಿ ಶಸ್ತ್ರಚಿಕಿತ್ಸೆ ಕೊಠಡಿಗೆ ಕಳುಹಿಸಿರುತ್ತಾರೆ.
ಹೇಗಿತ್ತು ಚಿಕಿತ್ಸೆ?
ಬಾಲಕಿಗೆ ಥೊರಾಕೊಟೊಮಿ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನ ನಡೆಸಲಾಗಿದ್ದು, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ ಸದಾಶಿವ್‌ರಾವ್, ಅರವಳಿಕೆ ತಜ್ಞ ಡಾ. ಸುನೀಲ್‌ಮತ್ತು ಡಾ. ಫ್ರೀಡಾ ಕುಟಿನ್ಹಾ ಅವರ ಜೊತೆ ಸೇರಿ ಬಾಲಕಿಯ ಎದೆಗೆ ಹೊಕ್ಕಿದ್ದ ಕಬ್ಬಿಣದ ರಾಡ್‌ನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಯನ್ನು ಪಿಡಿಯಾಟ್ರಿಕ್ ಇಂಟೆನ್ಸಿವ್‌ಕೇರ್‍ಗೆ ವರ್ಗಾಯಿಸಿ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಡಾ. ಸ್ವಾತಿ ರಾವ್‌ಕನ್ಸಲ್ಟೆಂಟ್-ಪಿಡಿಯಾಟ್ರಿಕ್‌ಇನ್‌ಟೆನ್ಸಿವಿಸ್ಟ್‌ಅವರ ಆರೈಕೆಯಲ್ಲಿ ಬಾಲಕಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಬೇಗ ಚೇತರಿಕೆ ಕಂಡುಕೊಂಡಿದ್ದಾಳೆ.
ಚಿಕಿತ್ಸೆ ಕುರಿತು ಮಾತನಾಡಿದ ಡಾ ಸದಾಶಿವ್‌ರಾವ್ “ಮಕ್ಕಳಲ್ಲಿ ಎದೆಯೊಳಗೆ ಇಂತಹ ವಸ್ತುಗಳು ಹೊಕ್ಕುವಂತಹ ಘಟನೆಗಳು ಅಪರೂಪ ಆದರೆ ಇವು ಜೀವಕ್ಕೆ ಅಪಾಯಕಾರಿ. ಚಾಕು, ರಾಡ್‌ನಂತಹ ವಸ್ತುಗಳು ಎದೆಯೊಳಗೆ ಹೊಕ್ಕಿದಂತಹ ಸಂದರ್ಭದಲ್ಲಿ ಒಳಹೊಕ್ಕಿದ ವಸ್ತುಗಳನ್ನು ತಜ್ಞರ ಮತ್ತು ಸಂಪೂರ್ಣ ಸೌಕರ್ಯ ಹೊಂದಿರುವ ಆರೋಗ್ಯ ಕೇಂದ್ರದಲ್ಲಿ ಮಾತ್ರ ಹೊರತೆಗೆಯಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ.
ಈ ಪ್ರಕರಣ ಕೂಡ ಸಂಕೀರ್ಣವಾಗಿದ್ದು ರಾಡ್‌ನ್ನು ಎದೆಯೊಳಗಿಂದ ತೆಗೆಯುವ ಮುನ್ನ ಹೆಚ್ಚುವರಿ ರಾಡ್‌ನ್ನು ತುಂಡರಿಸುವುದು ಅಗತ್ಯವಾಗಿತ್ತು” ಎಂದರು. ಒಂದು ವಾರದೊಳಗೆ, ಬಾಲಕಿ ಶ್ರೀನಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ” ಈ ಪ್ರಕರಣವು ಮಂಗಳೂರು ಕೆಎಂಸಿ ಆಸ್ಪತ್ರೆಯ ಮಕ್ಕಳ ಆರೈಕೆ ತುರ್ತು ಘಟಕದ ಅಚಲ ಬದ್ದತೆಯನ್ನು ಎತ್ತಿತೋರಿಸುತ್ತದೆ. ಜೀವ ಉಳಿಸುವ ಆಧುನಿಕ ಸೌಲಭ್ಯಗಳು ಮಕ್ಕಳ ಆರೈಕೆ ನೀಡಲು ಪರಿಣಿತಿ ಹೊಂದಿದ ತಂಡ, ಸುಸಜ್ಜಿತ ಮಕ್ಕಳ ತೀವ್ರ ಆರೈಕೆ ಘಟಕ, ಇವೆಲ್ಲವನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೆಎಂಸಿ” ಎಂದು ಹೇಳಿದರು. ಜೊತೆಗೆ ಬಾಲಕಿಯ ಜೀವ ಉಳಿಸುವುದರಲ್ಲಿ ಸಮುದಾಯದ ಜವಾಬ್ದಾರಿ ಎಷ್ಟು ಮುಖ್ಯವಾಗಿರುತ್ತದೆ, ಸ್ಥಳೀಯ ಆರೈಕೆ ಕೇಂದ್ರ ಬಾಲಕಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ನೀಡಿ ಆರೋಗ್ಯ ಸ್ಥಿರಪಡಿಸಿ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದೆ ಸ್ಥಳೀಯ ಆರೋಗ್ಯ ಘಟಕದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು” .
ಮಣಿಪಾಲ್ ಆಸ್ಪತ್ರೆಗಳ ಬಗ್ಗೆ: ಆರೋಗ್ಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಮಣಿಪಾಲ್ ಆಸ್ಪತ್ರೆಗಳು, ವಾರ್ಷಿಕವಾಗಿ 8 ಮಿಲಿಯನ್‌ಗಿಂತಲೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ ಭಾರತದ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವವರಲ್ಲಿ ಮುಂದಿದೆ. ಕೈಗೆಟುಕುವ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳ ಒದಗಿಸುವತ್ತ ಗಮನ ಹರಿಸುತ್ತದೆ. ಇಂದು 24 ನಗರಗಳಲ್ಲಿ 49 ಆಸ್ಪತ್ರೆಗಳ ಪ್ಯಾನ್-ಇಂಡಿಯಾ ಹೆಜ್ಜೆಗುರುತನ್ನು ಹೊಂದಿದ್ದು, 12,600 ಪರವಾನಗಿ ಪಡೆದ ಹಾಸಿಗೆಗಳು ಮತ್ತು 11,000+ ವೈದ್ಯರ ಪ್ರತಿಭಾನ್ವಿತ ಗುಂಪನ್ನು ಮತ್ತು 34 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಪ್ರಪಂಚದಾದ್ಯಂತದ ಹಲವಾರು ರೋಗಿಗಳಿಗೆ ಸಮಗ್ರ ಗುಣಪಡಿಸುವ ಮತ್ತು ತಡೆಗಟ್ಟುವ ಆರೈಕೆಯನ್ನು ಮಣಿಪಾಲ್ ಆಸ್ಪತ್ರೆಗಳು ಒದಗಿಸುತ್ತವೆ. ಮಣಿಪಾಲ್ ಆಸ್ಪತ್ರೆಗಳು AAHRPP ಮಾನ್ಯತೆ ಪಡೆದಿವೆ ಮತ್ತು ಅದರ ಜಾಲದಲ್ಲಿರುವ ಹೆಚ್ಚಿನ ಆಸ್ಪತ್ರೆಗಳು NABH, NABL, ER, ರಕ್ತ ಬ್ಯಾಂಕ್ ಮಾನ್ಯತೆ ಪಡೆದಿವೆ ಮತ್ತು ನರ್ಸಿಂಗ್ ಶ್ರೇಷ್ಠತೆಗಾಗಿ ಗುರುತಿಸಲ್ಪಟ್ಟಿವೆ.

