ಮಂಗಳೂರು : ರಾಜ್ಯದಲ್ಲಿ ಸಮೀಕ್ಷೆಯ ಗಡುವು ದಿನಾಂಕ ವಿಸ್ತರಣೆ ಬಗ್ಗೆ ಚರ್ಚೆ ವಿಚಾರವಾಗಿ ಮಂಗಳೂರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ನಿನ್ನೆವರೆಗೆ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಸರಾಸರಿ 71.5% ಸಮೀಕ್ಷೆ ಪೂರ್ತಿಯಾಗಿದೆ. ನಾಳೆ ಸಮೀಕ್ಷೆಗೆ ಕೊನೆಯ ದಿನ ಇದೆ. ಆಯೋಗದವರು ಸರ್ಕಾರಕ್ಕೆ ಏನು ಮನವಿ ಮಾಡ್ತಾರೆಂದು ಗಮನಿಸಬೇಕು. ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಕೊಡಲು ನಾವು ಇಷ್ಟಪಡಲ್ಲ ಎಂದರು.
ಶನಿವಾರ, ಆದಿತ್ಯವಾರ ಬಂದಾಗ ಅದನ್ನು ಏನಾದರೂ ಅನುಕೂಲ ಮಾಡಿಕೊಡ್ತಾರಾ.? ಬೆಳಗ್ಗೆ ಮತ್ತು ಸಂಜೆ ಎರಡೆರಡು ಗಂಟೆ ಮಾಡೋಕೆ ಸಾಧ್ಯ ಇದೆಯಾ..? ಇದನ್ನು ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಆಯೋಗದವರು ಈ ಬಗ್ಗೆ ಮನವಿ ಮಾಡಬೇಕು. ಇನ್ನು ಸಮಯ ಬೇಕೆಂದು ಆಯೋಗದವರು ಕೇಳಿದ್ರೆ. ನಾಳೆ ಸಂಜೆ ಮುಖ್ಯಮಂತ್ರಿಗಳು ಈ ಬಗ್ಗೆ ಮಾತನಾಡಬಹುದು ಎಂದರು.
ಆದ್ರೆ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದ್ರೆ ಆಗಬಾರದೆಂದು ಮನವಿ ಮಾಡಿದ್ದೇನೆ. ಶಿಕ್ಷಕರ ಸಂಘದವರ ಜೊತೆಯೂ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾವ ಯಾವ ವ್ಯವಸ್ಥೆಯಲ್ಲಿ ಮಾಡಬಹುದೆಂದು ಮುಖ್ಯಮಂತ್ರಿಗಳು ಹೇಳ್ತಾರೆ. ಎಂಟನೇ ತಾರೀಖುವರೆಗೂ ಕಾದು ನೋಡುವ. ಕರ್ತವ್ಯದ ಸಮಯದಲ್ಲಿ ಶಿಕ್ಷಕರನ್ನು ಕೊಡಲ್ಲ ಎಂದು ನಾನು ಹೇಳಿದ್ದೆ. ಆದಾದ ಬಳಿಕ ರಜಾ ಅವಧಿಯಲ್ಲಿ ಮಾಡೋಣ ಅಂತಾ ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಿದ್ದು ಎಂದರು.

