ಮಂಗಳೂರು : ರಸ್ತೆ ಬದಿಯಲ್ಲಿ ಮಲಗಿದ್ದ ದನಗಳ ಕಳ್ಳತನಕ್ಕೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಗಡಿಕಲ್ಲಿ ಎಂಬಲ್ಲಿ ಬೆಳಕಿಗೆ ಬಂದಿದೆ.
ದನಗಳಿಗೆ ಅಮಲು ಬರುವ ಇಂಜೆಕ್ಷನ್ ನೀಡಿ ಅಪಹರಣಕ್ಕೆ ಯತ್ನಿಸಿದ್ದಾರೆ. ರಸ್ತೆ ಬದಿ ಮಲಗಿದ್ದ ದನಗಳನ್ನು ಬಲವಂತವಾಗಿ ಹಿಡಿದು ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಅನ್ವರ್ ಎಂಬವರ ಮನೆ ಎದುರು ಕೃತ್ಯ ನಡೆದಿದೆ. ದನಗಳನ್ನು ಕಾರಿಗೆ ಸಾಗಿಸುತ್ತಿದ್ದ ವೇಳೆ ನಾಯಿಗಳು ಜೋರಾಗಿ ಬೊಗಳಿದೆ. ನಾಯಿಗಳ ಬೊಬ್ಬೆ ಕೇಳಿ ಅನ್ವರ್ ಮನೆಯಿಂದ ಹೊರಗೆ ಬಂದಿದ್ದಾರೆ.
ಅನ್ವರ್ ಜೋರು ಬೊಬ್ಬೆ ಹೊಡೆಯುತ್ತಿದ್ದಂತೆ ದನಗಳ್ಳರು ಪರಾರಿಯಾಗಿದ್ದಾರೆ. ದನಗಳನ್ನು ಸಾಗಾಟ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

