ಮಂಗಳೂರು: ಬ್ಯೂಟಿಶನ್ ರವರ ಶ್ರೇಯೋಭಿವೃದ್ಧಿಗೆ ಹುಟ್ಟಿಕೊಂಡ ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಸಂಸ್ಥೆಯು ಮಂಗಳೂರು ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಸಂಘಟನೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಲಾಗುವುದು ಮತ್ತು ಸಂಘಟನೆ ಸದಸ್ಯರ ಆಶಾ ಕಿರಣವಾಗಿ ಕೆಲಸ ಮಾಡಲಾಗುವುದು ಎಂದು ಆಲ್ ಇಂಡಿಯಾ ಹ್ಯಾರ್ ಹ್ಯಾಂಡ್ ಬ್ಯೂಟಿ ಎಸೋಸಿಯೇಷನ್ ಮಂಗಳೂರು ಇದರ ನೂತನ ಅಧ್ಯಕ್ಷರಾದ ಲತಾ ಹರೀಶ್ ಭರವಸೆ ನೀಡಿದರು.
Whatsapp Image 2024 09 17 At 5.41.22 Pm
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎಸೋಸಿಯೇಷನ್ ನ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮೇಲಿನಂತೆ ನುಡಿದರು.
Whatsapp Image 2024 09 17 At 5.38.49 Pm
ಮಹಾಸಭೆಯ ಕಾರ್ಯಕಲಾಪವನ್ನು ಸಲಹಾ ಸಮಿತಿಯ ಸದಸ್ಯರಾದ ಮರ್ಸಿ ವೀಣ ಡಿಸೋಜಾ, ಸೋನಿಯಾ ಡಿಲಿಮ, ಮತ್ತು ಜಗದೀಶ್ ನಡೆಸಿಕೊಟ್ಟರು.

Whatsapp Image 2024 09 17 At 5.38.50 Pm

ಕಾರ್ಯದರ್ಶಿಯಾಗಿ ಭವಾನಿ ರೈ, ಖಜಾಂಜಿ ಯಾಗಿ ರಜನಿ ಇವರು ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯ ರಾಗಿ ಸ್ನೇಹ , ಪದ್ಮ, ಮೀನಾ, ಸಂಗೀತ, ಶಾರದಾ, ರೂಪ, ಸಹನಾ, ಶಾಂತ, ಶ್ವೇತ ಇವರು ಆಯ್ಕೆಯಾಗಿದ್ದಾರೆ.