ಮಂಗಳೂರು : ಸುತ್ತಮುತ್ತಲಿನ ಭಾಗಗಳಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಸುರಿದ ಭಾರೀ ಮಳೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ವ್ಯತ್ಯಯಗೊಂಡಿದೆ.

ಬೆಂಗಳೂರಿನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಐಎಕ್ಸ್ 2924 ವಿಮಾನವು ದಟ್ಟ ಮೋಡ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಇಳಿಯಲು ಸಾಧ್ಯವಾಗದೆ, ಆಗಸದಲ್ಲೇ ಹಲವು ಬಾರಿ ಸುತ್ತು ಹೊಡೆದಿದೆ.

ಮೂಡಬಿದಿರೆ, ಬೆಳ್ತಂಗಡಿ, ಬಂಟ್ವಾಳ ಭಾಗಗಳಲ್ಲಿ ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ ನಡೆಸಿದ್ದನ್ನು ಕಂಡ ಸ್ಥಳೀಯರು ತಾಂತ್ರಿಕ ದೋಷ ಇರಬಹುದೆಂದು ಆತಂಕಗೊಂಡಿದ್ದರು. ಸದ್ಯ ಹವಾಮಾನ ವೈಪರಿತ್ಯದಿಂದಾಗಿ ಈ ‘ಹೋಲ್ಡಿಂಗ್ ಪ್ಯಾಟರ್ನ್‌’ ಅನಿವಾರ್ಯವಾಗಿತ್ತು ಎಂದು ತಿಳಿದುಬಂದಿದೆ.

View this post on Instagram

A post shared by News Karnataka (@newskarnataka)