ನಿಟ್ಟೆ: ಚೆನ್ನೈನ ಕೆಸಿಜಿ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಜುಲೈ 18 ರಿಂದ 20 ರವರೆಗೆ ಎಸ್ಎಇ ಇಂಡಿಯಾ ದಕ್ಷಿಣ ವಿಭಾಗ ಆಯೋಜಿಸಿದ್ದ ಎಸ್ಎಇ ಸ್ವಾಯತ್ತ ಡ್ರೋನ್ ವಿನ್ಯಾಸ ಚಾಲೆಂಜ್ನಲ್ಲಿ ಏರೋಕ್ಲಬ್ ನಿಟ್ಟೆ ತಂಡವು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಡ್ರೋನ್ನಲ್ಲಿ ಅವರು ರೂಪಿಸಿದ ‘ಆಬ್ಜೆಕ್ಟ್ ಡ್ರಾಪ್ ಮೆಕ್ಯಾನಿಸಂ’ ಗಾಗಿ ತಂಡವು ವಿಶೇಷ ಬಹುಮಾನವನ್ನೂ ಗೆದ್ದಿದೆ. ಈ ಸಾಧನೆಗೆ ತಂಡವನ್ನು ಕಾಲೇಜಿನ ಆಡಳಿತ ಮಂಡಳಿ ಶ್ಲಾಘಿಸಿದೆ ಹಾಗೂ ಕಾಲೇಜಿನ ಹೆಮ್ಮೆಯನ್ನು ಇನ್ನು ಹೆಚ್ಚಿಸಿದೆ ಎಂದು ನಿಟ್ಟೆ ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.