ಮಂಗಳೂರು  :  ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಘರ್ಷಣೆಗೆ ಮುಸ್ಲಿಮರನ್ನ ಹೊಣೆಯಾಗಿಸಿ ಪ್ರತಿಭಟನೆ ನಡೆಸಿ ‘ಮಿಲಾದ್ ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ’ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಶರಣ್ ಪಂಪ್ವೆಲ್‌ಗೆ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಸವಾಲು ಹಾಕಿ ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ ರವಾನಿಸಿದ ಘಟನೆ ನಡೆದಿದೆ.

ಭಜರಂಗದಳ-ವಿ.ಎಚ್.ಪಿ ಯಿಂದ ಬಿ‌.ಸಿ.ರೋಡ್ ಚಲೋ ಕರೆ ನೀಡಿದ್ದು ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಇನ್ನು ಹೆಚ್ಚುವರಿ ಪೊಲೀಸರ ನಿಯೋಜನೆ ಕೂಡ ಮಾಡಲಾಗುವುದು.

ಸದ್ಯ  ಭಜರಂಗದಳ-ವಿ.ಎಚ್.ಪಿ ಯಿಂದ ಬಿ‌.ಸಿ.ರೋಡ್ ಚಲೋ ಕರೆ ಹಿನ್ನಲೆ ಕೇಸರಿ ಶಾಲು ಧರಿಸಿ   ಬಿ.ಸಿ.ರೋಡ್ ನಲ್ಲಿ  ಹಿಂದು ಸಂಘಟನೆ ಕಾರ್ಯಕರ್ತರು ಜಮಾಯುಸುತ್ತಿದ್ದಾರೆ.ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯ  ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.