ಮಂಗಳೂರು: ಬರ್ಗರ್, ಪಿಝಾ ಸೇರಿದಂತೆ ಜಂಕ್ ಫುಡ್‌ಗಳಿಂದ ಸಾಕಷ್ಟು ರೋಗಗಳಿಗೆ ಕಾರಣವಾಗುತ್ತಿರುವುದ ರಿಂದ 10ನೆ ತರಗತಿವರೆಗಿನ ಶಾಲೆ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಇಂತಹ ಆಹಾರ ಪದಾರ್ಥಗಳನ್ನು ನಿಷೇಧಿ ಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ವೆನ್‌ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ (ಮಕ್ಕಳ ಆಸ್ಪತ್ರೆ)ಯ ಸಭಾಂಗಣದಲ್ಲಿ ಆಸ್ಪತ್ರೆಯ ಕುಂದುಕೊರತೆ ಹಾಗೂ ಅಭಿವೃದ್ಧಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಆಹಾರ ಸುರಕ್ಷತೆಯಲ್ಲಿ ಮಹತ್ತರವಾದ ಬದಲಾವಣೆ ತರುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಆಹಾರ ಪದಾರ್ಥಗಳ ತಪಾಸಣಾ ಪ್ರಯೋಗಾಲಯ (ಲ್ಯಾಬ್‌)ವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾ ಗುತ್ತಿದೆ ಎಂದವರು ಈ ಸಂದರ್ಭ ತಿಳಿಸಿದರು.

ಜಂಕ್ ಫುಡ್‌ಗಳನ್ನು ತಯಾರಿಸುವ ಅದೆಷ್ಟೇ ದೊಡ್ಡ ಕಂಪನಿಗಳಾಗಿದ್ದರೂ ಆಹಾರದ ಗುಣಮಟ್ಟದಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ಅಂತಹ ಕಂಪನಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರೂ ಜಯ ಸಿಗದಂತಹ ರೀತಿಯಲ್ಲಿ ದಾಖಲೆಯನ್ನು ಇಟ್ಟುಕೊಳ್ಳುವಂತಹ ಅತ್ಯಾಧುನಿಕ ಲ್ಯಾಬ್‌ನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದವರು ಹೇಳಿದರು.

ಯಾವುದೇ ಸೂಪರ್ ಮಾರ್ಕೆಟ್‌ಗೆ ದಾಳಿ ಮಾಡಿದರೂ ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್ ಇರುವ ಆಹಾರವನ್ನು ಪರೀಕ್ಷೆಗೊಳಪಡಿಸಿದರೂ ಅದು ಆಹಾರ ಸುರಕ್ಷತೆಯಡಿಯಲ್ಲಿ ಇರುವುದಿಲ್ಲ. ಹಾಗಾಗಿ ಇದಕ್ಕಾಗಿ ನಿಯಂತ್ರಣ ಹೇರುವ ಕಾರ್ಯ ಆಗಬೇಕಾಗಿದೆ. ಬಹುತೇಕ ಆರೋಗ್ಯ ಸಮಸ್ಯೆಗಳು ಈಗಿನ ಅನಾರೋಗ್ಯಕರ, ಅಪೌಷ್ಟಿಕ ಆಹಾರಗಳಿಂದಲೇ ಬರುತ್ತಿದೆ. ಕಿಡ್ನಿ ಸಮಸ್ಯೆ, ಕ್ಯಾನ್ಸ‌ರ್ ರೋಗಗಳು ಸಾಂಕ್ರಾಮಿಕ ಅಲ್ಲವಾಗಿದ್ದರೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಶಾಲೆಗಳಲ್ಲಿ ಆರೋಗ್ಯಕರ ಆಹಾರ ದೊರಕಿದಾಗ ಮಕ್ಕಳು ಈ ಜಂಕ್ ಫುಡ್‌ಗಳಿಂದ ದೂರವಾಗಿ ಬಳಿಕ ರೋಗಗಳಿಗೆ ತುತ್ತಾಗುವುದು ಕಡಿಮೆಯಾಗಲಿದೆ. ಸರಕಾರಿ ಆಸ್ಪತ್ರೆ ಕ್ಯಾಂಪಸ್‌ಗಳಲ್ಲಿಯೂ ಜಂಕ್ ಫುಡ್ ಇಲ್ಲದ ರೀತಿ ಕ್ಯಾಂಟೀನ್‌ಗಳನ್ನು ನಿರ್ವಹಿಸಲು ಕ್ರಮ ವಹಿಸಲಾಗುವುದು. ಈ ಬಗ್ಗೆ ಸಾರ್ವಜನಿಕರು ಕೂಡಾ ಯಾವುದೇ ರೀತಿಯ ಸಲಹೆ, ಸೂಚನೆಗಳಿದ್ದಲ್ಲಿ ನೀಡಬಹುದು ಎಂದು ಅವರು ಹೇಳಿದರು.

View this post on Instagram

A post shared by News Karnataka (@newskarnataka)