ಮಂಗಳೂರು: MRPL ಆವರಣದಲ್ಲಿ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ತುಳುನಾಡಿನ ನೆಲ್ಲಿದಡಿ ಜುಮಾದಿ ದೈವಸ್ಥಾನದ ದೈವದ ನುಡಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ನೆಲ್ಲಿದಡಿ ಜುಮಾದಿ ದೈವಸ್ಥಾನದ ಜಾಗದ ವಿಚಾರವಾಗಿ ಗ್ರಾಮಸ್ಥರು ಹಾಗೂ MRPL ನಡುವೆ ಹಲವು ವರ್ಷಗಳಿಂದ ವಿವಾದ ಮತ್ತು ಹೋರಾಟ ನಡೆದಿತ್ತು ಎನ್ನಲಾಗಿದೆ. ದೈವಸ್ಥಾನದ ಜಾಗವನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ದೈವದ ಮೊರೆ ಹೋಗಿದ್ದರು.

ಕಳೆದ ವರ್ಷ ನಡೆದ ನೇಮೋತ್ಸವದ ಸಂದರ್ಭದಲ್ಲಿ ದೈವವು “ನನ್ನ ಮಣ್ಣನ್ನು ನಾನೇ ಉಳಿಸಿಕೊಳ್ಳುತ್ತೇನೆ… ಯಾರೂ ಭಯಪಡಬೇಡಿ” ಎಂದು ನುಡಿದಿತ್ತು ಎಂದು ಭಕ್ತರು ಹೇಳುತ್ತಿದ್ದಾರೆ.

ಆದರೆ ಇದೀಗ MRPL ಆವರಣದಲ್ಲೇ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ, “ಈ ಸ್ಫೋಟದ ಹಿಂದೆ ದೈವದ ಅಚ್ಚರಿಯ ನುಡಿಯೇ ಕಾರಣವೇ?” ಎಂಬ ಚರ್ಚೆ ತುಳುನಾಡಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ದೈವವು ಅಂದು ನುಡಿದ ಮಾತುಗಳು ಮತ್ತು ಇದೀಗ ನಡೆದಿರುವ ಘಟನೆಗಳನ್ನು ಕೆಲ ಭಕ್ತರು ಪರಸ್ಪರ ಸಂಬಂಧಿಸಿ ನೋಡುತ್ತಿದ್ದಾರೆ. “ದೈವ ತನ್ನ ಕ್ಷೇತ್ರವನ್ನು ತಾನೇ ರಕ್ಷಿಸಿಕೊಂಡಿದೆ” ಎಂಬ ನಂಬಿಕೆಯೂ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದೆ.

View this post on Instagram

A post shared by News Karnataka (@newskarnataka)