ಮಂಗಳೂರು: ಕೇವಲ ಇಸ್ಲಾಂ ಧರ್ಮದ ಭಕ್ತರಿಗೆ ಮಾತ್ರವಲ್ಲ, ಎಲ್ಲಾ ಧರ್ಮೀಯರಿಗೂ ಮಸೀದಿ ಬಾಗಿಲು ತೆರೆದಿದ್ದ ಒಂದು ವಿಶೇಷ ಕಾರ್ಯಕ್ರಮ ಇದು. ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಜಾಮೀಯ ಜುಮ್ಮಾ ಮಸೀದಿ ಈ ಬಾರಿ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಧರ್ಮದ ಹೆಸರಿನಲ್ಲಿ ಭಿನ್ನತೆ ತೋರಿಸುವ ಇಂದಿನ ಕಾಲಘಟ್ಟದಲ್ಲಿ, ಇಂತಹ ಕಾರ್ಯಕ್ರಮಗಳು ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯ ನೈಜ ರೂಪವನ್ನು ತೋರಿಸುತ್ತವೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವ ಧರ್ಮೀಯರು – ಮಸೀದಿಯ ವೈಶಿಷ್ಟ್ಯ, ಅಂತರಂಗ, ಹಾಗೂ ಪ್ರಾರ್ಥನಾ ವಿಧಾನಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಅವಕಾಶ ನಮ್ಮದಾಗಿದೆ.

ನಾವು ಮೊದಲ ಬಾರಿಗೆ ಮಸೀದಿಯೊಳಗೆ ನೇರವಾಗಿ ಬಂದೆವು. ಇಲ್ಲಿ ನಡೆವ ಪ್ರಾರ್ಥನೆ, ಶಿಷ್ಟಾಚಾರ ಇವೆಲ್ಲಾ ನೋಡಿದಾಗ ನನಗೆ ತುಂಬಾ ಶಾಂತಿ ಅನುಭವವಾಯಿತು. ಇಂತಹ ಕಾರ್ಯಕ್ರಮ ಇನ್ನೂ ಎಲ್ಲೆಡೆ ನಡೆಯಲಿ.” ಎನ್ನುತ್ತಾರೆ.

“ಮಸೀದಿ ಯಾವುದೇ ರಹಸ್ಯ ಅಥವಾ ಅಪಾರದ ಕೇಂದ್ರವಲ್ಲ. ಇದು ಶ್ರದ್ಧೆ, ಶಾಂತಿ ಮತ್ತು ಸಮಾಜಸೌಹಾರ್ದತೆಯ ಪ್ರಾತಿನಿಧ್ಯವಾಗಿದೆ. ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಇರುವ ಅನಾವಶ್ಯಕ ಭಯ ಅಥವಾ ಗೊಂದಲ ನಿವಾರಣೆಯಾಗುತ್ತದೆ ಎಂಬ ವಿಶ್ವಾಸ ನಮಗಿದೆ.” ಇಂತಹ ಕಾರ್ಯಕ್ರಮಗಳು ಮಸೀದಿ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಗಳನ್ನು ತಿದ್ದುಹೇಳಿ, ಧರ್ಮಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡುತ್ತವೆ. ಒಂದೇ ವೇದಿಕೆಯಲ್ಲಿ ಎಲ್ಲ ಧರ್ಮೀಯರು ಶಾಂತಿಯ ಸಂದೇಶವನ್ನು ಹಂಚಿಕೊಂಡ ಈ ವಿಶೇಷ ಕ್ಷಣ – ಇತರ ಸ್ಥಳಗಳಿಗೂ ಪ್ರೇರಣೆಯಾಗಲಿ ಎಂಬ ಆಶಯ ನಮ್ಮದು ಎನ್ನುತ್ತಾರೆ.

ಒಟ್ಡಿನಲ್ಲಿ ಸಾಂಪ್ರದಾಯಿಕ ಗಡಿಗಳನ್ನು ಮೀರಿ, ಮಾನವೀಯತೆಗೆ ಮೊಲೆ ನೀಡುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ, ಜನರು ಹೆಚ್ಚು ಭಾಗವಹಿಸಿ ಜಿಲ್ಲೆಯಲ್ಲಿ ಶಾಮನತಿ ಸಹಬಾಳ್ವೆ ಸೃಷ್ಟಿಯಾಗಲಿ ಎಂಬುದು ನಮ್ಮ ಆಶಯ.