ಮಂಗಳೂರು: ಸಮಾನ ಮನಸ್ಕರ ಒಂದು ಹೊಸ ರಾಜಕೀಯ ಪಕ್ಷ ಕಟ್ಟಲಾಗುತ್ತಿದೆ ಎಂದು ಮಂಗಳೂರಿನಲ್ಲಿ ಚೇತನ್ ಅಹಿಂಸಾ ಹೇಳಿಕೆ ನೀಡಿದರು.

ರಾಜ್ಯದಲ್ಲಿ ಒಂದು ಪೊಲಿಟಿಕಲ್ ಮೂವ್ಮೆಂಟ್ ನ ಅವಶ್ಯಕತೆ ಇದೆ‌. ಆದ್ರಿಂದ ಮುಂದಿನ ಜನವರಿ ಒಳಗೆ ಒಂದು ಪ್ರಾದೇಶಿಕ ಪಕ್ಷ ಕಟ್ಟುತ್ತೇವೆ. ಈಗಾಗಲೇ ರಾಜ್ಯ ಪ್ರವಾಸ ಮಾಡಲಾಗುತ್ತಿದೆ. ಹಿಂದುತ್ವ ಸೇರಿದಂತೆ ವಿವಿಧ ಅಜೆಂಡಾ ಇಟ್ಟುಕೊಂಡು ಸಂಘಟನೆಗಳು ಕೆಲಸ ಮಾಡುತ್ತಿವೆ. ಅದನ್ನೆಲ್ಲಾ ಹೊರತುಪಡಿಸಿದ ಸಮಾನ ಮನಸ್ಕರು ಸೇರಿ ಒಂದು ಹೊಸ ಪಕ್ಷ ಕಟ್ಟುತ್ತೇವೆ ಎಂದರು.

ಪ್ರಜಾಕೀಯ ಪಕ್ಷದ ಐಡಿಯಾಲಜಿ ನನಗೆ ಕನ್ವಿನ್ಸ್ ಆಗಿಲ್ಲ. ಪ್ರಜಾಕೀಯ ಪಕ್ಷ ಕಟ್ಟಿದವರಿಗೂ ಈ ಬಗ್ಗೆ ಕ್ಯಾರಿಟಿ ಇಲ್ಲ. ಈಗಿರೋ ಪಕ್ಷಗಳು ಕೂಡ ಅವರದ್ದೆ ಆದ ವೈಯಕ್ತಿಕ ಲಾಭಕ್ಕೆ ನಿಂತಿವೆ. ಟಿವಿಕೆ ಪಕ್ಷ ಸ್ಟಾರ್ ಡಮ್ ನಲ್ಲಿ ಅಧಿಕಾರಕ್ಕೆ ಬಂದಿದೆ‌. ತಮಿಳುನಾಡು ಸಿಎಂ, ಆಂದ್ರಪ್ರದೇಶದ ಡಿಸಿಎಂ ಜನರ ಮದ್ಯೆ ಬಂದ್ರೆ ನಿಜವಾದ ಸಮಸ್ಯೆ ಗೊತ್ತಾಗುತ್ತೆ. ಬಿಡದಿ ಟೌನ್ ಶಿಪ್ ಆಗಬಾರದು. ಅದಕ್ಕಾಗಿ ನಾನು ಹೋರಾಟ ಮಾಡುತ್ತೇನೆ ಎಂದರು.

View this post on Instagram

A post shared by News Karnataka (@newskarnataka)