ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದಲ್ಲಿ ಚಿರತೆಯೊಂದು ರಸ್ತೆಗೆ ಅಡ್ಡಲಾಗಿ ವಿಶ್ರಮಿಸುತ್ತಿದ್ದ ದೃಶ್ಯ ವೈರಲ್ಲಾಗಿದೆ.

ಮದ್ದೂರು ಚೆಕ್ಪೋಸ್ಟ್ ಕೂಗಳತೆ ದೂರದಲ್ಲೇ ರಸ್ತೆಗೆ ಬಂದ ಚಿರತೆ ಅಡ್ಡಲಾಗಿ ಮಲಗಿದೆ, ಚಿರತೆಯನ್ನ ಕಂಡ ಪ್ರವಾಸಿಗರು ಫುಳಕಿತರಾಗಿದ್ದಾರೆ, ಸನಿಹದಲ್ಲೇ ಚಿರತೆ ವಿಶ್ರಮಿಸುತ್ತಿದ್ದರಿಂದ ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

