ದಕ್ಷಿಣ ಕನ್ನಡ : ಪುತ್ತೂರಿನಲ್ಲಿ ಮದುವೆ ಮುಗಿಸಿ ಹೆಬ್ರಿಗೆ ಹೋಗುವ ಮದುವೆಯ ಖಾಸಗಿ ಬಸ್ಸನ್ನು ಮೂಡಬಿದಿರೆಯ ಹೋಟೆಲ್ ಗೋಳಿಬಜೆ ಸೆಂಟರ್ ನಲ್ಲಿ ಚಹಾ ಕುಡಿಯುವುದಕ್ಕಾಗಿ ನಿಲ್ಲಿಸಿದ್ದರು.
ಬಸ್ಸಿನ ಡ್ರೈವರ್ ಬಸ್ಸನ್ನು ಗಮನಿಸಿದ ಸಂದರ್ಭದಲ್ಲಿ ಒಂದು ಬೃಹತ್ ಗಾತ್ರದ ಹಾವು ಬಸ್ಸಿನೊಳಗೆ ಇರುವುದು ತಿಳಿಯಿತು. ಈ ಸಮಯದಲ್ಲಿ ಸ್ಥಳಿಯರ ಸಹಕಾರದಿಂದ ಹಾವು ಹಿಡಿಯೋರನ್ನು ಸಂಪರ್ಕಿಸಿದರು.
ತದನಂತರ ಅಲ್ಲಿಗೆ ಹಾವು ಹಿಡಿಯುವ ದಿನೇಶ್ ಬಂದು ಬಸ್ಸಿನೊಳಗೆ ಮಲಗಿದ್ದ ಹಾವನ್ನ ಹೊರತೆಗೆದರು. ಗಡ್ಡ ದಿನೇಶ್ ಪಡುಕೊಣಾಜೆ&ಟೀಮ್ ಅವರಿಗೆ ಈ ವೇಳೆ ಧನ್ಯವಾದ ತಿಳಿಸಿದರು.

