ಮಂಗಳೂರು: ಮಹಾ ಮಳೆಯ ನೆರೆಯಿಂದಾಗಿ ಪಚ್ಚಾಡಿ ಸಂತೋಷ್ ಎಂಬುವವರ ಮನೆ ಕುಸಿದು ಬಿದ್ದಿರುವ ಘಟನೆ ದಕ್ಷಿಣ ಕನ್ನಡದ ಮೂಡುಬಿದಿರೆ ತಾಲೂಕಿನ ಶಿರ್ತಾಡಿಯ ಪಚ್ಚಾಡಿಯಲ್ಲಿ ನಡೆದಿದೆ.
ಭಾರೀ ಮಳೆಯಿಂದಾಗಿ ಪಚ್ಚಾಡಿ ಸಂತೋಷ್ ಎಂಬುವವರ ಮನೆಗೆ ಫಲ್ಗುಣಿ ನದಿಯ ನೀರು ನುಗ್ಗಿ ಮನೆ ಮುಳುಗಡೆಯಾಗಿತ್ತು. ಭಾರಿ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ಮನೆ ಕುಸಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಪಾಯ ಅರಿತ ಮನೆಯವರು ಸುರಕ್ಷಿತ ಸ್ಥಳಕ್ಕೆ ಸ್ಥಳತರಗೊಂಡಿದ್ದರು. ಅದೃಷ್ಟವಶಾತ್ ದುರಂತ ತಪ್ಪಿದೆ ಎಂಬ ಮಾಹಿತಿ ತಿಳಿದು ಬಂದಿದೆ.

