ಮಂಗಳೂರು: ಪಂಪುವೆಲ್ ಬಳಿಯ ಫಾದರ್ ಮುಲ್ಲರ್ ಕನ್ವೆಂಶನ್ ಹಾಲ್ನಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ನೇತೃತ್ವದಲ್ಲಿ 10ನೇ ವರ್ಷದ ಸೌಹಾರ್ಧ ಇಪ್ತಾರ್ ಕೂಟವನ್ನು ಮಾರ್ಚ್ 23 ರಂದು ರವಿವಾರ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮೂಡಬಿದರೆ ಶ್ರೀ ಕೆಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿಯವರು ಮಾತನಾಡಿ ನಾವು ಒಳ್ಳೆಯ ಮನಸ್ಸಿನಿಂದ ನೀಡಿದ್ದಲ್ಲಿ ನಮಗೆ ಒಳ್ಳೆಯ ಪ್ರತಿಫಲವೇ ಸಿಗುತ್ತದೆ. ಉತ್ತಮ ಹೃದಯ ಇದ್ದಲ್ಲಿ ಜಗತ್ತು ಗೆಲ್ಲಲು ಸಾಧ್ಯವಿದೆ ಸಮಾಜಕ್ಕೆ ಏನು ನೀಡುತ್ತೇವೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ನುಡಿದರು.
ಸಂತ ಅಲೋಷಿಯಸ್ ಡೀಮ್ಡ್ ಯುನಿರ್ವಸಿಟಿಯ ಕುಲಪತಿ ವಂ.ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ ದಾನಕ್ಕೆ ಮತ್ತೊಂದು ಹೆಸರು ರಂಜಾನ್ ಉಪವಾಸದೊಂದಿಗೆ ಅಧ್ಯಾತ್ಮಿಕ ನಂಬಿಕೆ ಮುಖ್ಯವಾಗಿದೆ. ಸೌಹಾರ್ಧ ಇಫ್ತಾರ್ಮೂಲಕ ಮನಕುಲವನ್ನು ತಲುಪಲು ಸಾಧ್ಯವಾಗಲಿದೆ ಎಂದು ನುಡಿದರು.
ಮುಸ್ಲಿಂ ಧರ್ಮಗುರು ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ಅಧ್ಯಕ್ಷ ಕೆ.ಪಿ. ಕೆ.ಪಿ. ಮಹಮ್ಮದ್ ಇಸಾಕ್ ಮಾತನಾಡಿ ಎಲ್ಲಾ ಮನುಷ್ಯನನ್ನು ಸೃಷ್ಟಿಸಿರುವುದು ಒಬ್ಬನೇ ದೇವರಾಗಿದ್ದು ಜನಿಸಿದ ಪ್ರತಿಯೊಬ್ಬನಿಗೂ ಬಾಳೂವ ಸಮಾನ ಹಕ್ಕಿದೆ ಎಂದು ನುಡಿದರು.
ಸೌಹಾರ್ಧ ಇಫ್ತಾರ್ ಕೂಟದಲ್ಲಿ ಮಾಜಿ ಶಾಸಕ ಜೆ.ಅರ್ ಲೋಬೋ, ಡಾ| ಭಾಸ್ಕರ್ ಶೆಟ್ಟಿ, ಡಾ| ಕವಿತಾ ಡಿʼಸೋಜಾ, ಶಶಿಧರ್ ಹೆಗ್ಡೆ, ಅಶ್ರಫ್ ನವೀನ್ ಡಿʼಸೋಜಾ, ಪ್ರವೀಣ್ ಚಂದ್ರ ಆಳ್ವ, ಶಂಶುದ್ದೀನ್ ಡಾ| ಜನಾರ್ಧನ್, ರೋಹನ್ ಮೊಂತೆರೋ, ಭಾಸ್ಕರ್ ಮೊಯಿಲಿ,ಹೇಮನಾಥ ಶೆಟ್ಟಿ ಪುತ್ತೂರು,ರಾಕೇಶ್ ಮಲ್ಲಿ, ಜೆ.ಎ.ಸಲೀಂ. ಗಣೇಶ್ ಶೆಟ್ಟಿ ಪುಡ್ ಲ್ಯಾಂಡ್, ಹಾಜಿ ಗಲಾಂ ಮಹಮ್ಮದ್ ಹೆಜಮಾಡಿ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಸ್ವಾಗತಿಸಿದರು. ದೈಜಿವಲ್ಡ್ನ ಶ್ರೀ ಚೇತನ್, ಲೋಕೇಶ್ರೈ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಕಾರ್ಪೋರೇಟರ್ಜೆ ನಾಗೇಂದ್ರ ಕುಮಾರ್ ಧನ್ಯವಾದ ಮಾಡಿದರು.

