ಕಾರ್ಕಳ: ಜುಲೈ 26 ರಂದು ನಿಟ್ಟೆ ರೋಟರಿ ಕ್ಲಬ್ ನ ಸದಸ್ಯರು ‘ಕಾರ್ಗಿಲ್ ವಿಜಯ ದಿವಸ’ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸುಮಾರು 19 ವರ್ಷಗಳ ಕಾಲ ಭಾರತದ ಭೂಸೇನೆಯಲ್ಲಿ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ ಆಗಿ ಸೇವೆಸಲ್ಲಿಸಿದ ರಿಟೈರ್ಡ್ ಹವಾಲ್ದಾರ್ ಕಿರಣ್ ಕುಮಾರ್ ಕುಲಾಲ್ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ. ಸತೀಶ್ ಕುಮಾರ್ ವಹಿಸಿ ಕಾರ್ಯಕ್ರಮಕ್ಕೆ ಬಂದಂತಹ ಸಭಿಕರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರೊ. ಡಾ. ರಘುನಂದನ್ ಅತಿಥಿಯಾಗಿ ಆಗಮಿಸಿದ ಕಿರಣ್ ಕುಮಾರ್ ಕುಲಾಲ್ ರನ್ನು ಸಭೆಗೆ ಪರಿಚಯಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಿರಣ್ ಕುಮಾರ್ ಕುಲಾಲ್ ಅವರು ಕಾರ್ಗಿಲ್ ಯುದ್ಧ ಯಾವಾಗ, ಏಕೆ, ಹೇಗೆ ನಡೆಯಿತು ಮತ್ತು ಆ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆ ನಡೆದುಕೊಂಡ ರೀತಿಯನ್ನು ನೆನಪಿಸುತ್ತಾ ತಮ್ಮ ಸೇವೆಯ ಅವಧಿಯನ್ನು ನೆನಪಿಸಿಕೊಂಡರು.
ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿ ಇಟ್ಟಂತಹ ವೀರಯೋಧರ ಸ್ಮರಣೆ ಮತ್ತು ಮಾತನ್ನು ಕೇಳಲು ಬಹುತೇಕ ರೋಟರಿ ಸದಸ್ಯರು, ರೋಟರಿ ಸಮುದಾಯದ ಸದಸ್ಯರು ಹಾಜರಿದ್ದರು.

