ಬಜಪೆ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಯೋಗಾಸನ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ಮೇಘಶ್ರೀ ಶೆಟ್ಟಿ ಕೊಡೆತ್ತೂರು ಅವರು ಸಾಂಪ್ರದಾಯಿಕ ಯೋಗ ಹಿರಿಯರ ವಿಭಾಗ ಮತ್ತು ರಿದಮಿಕ್ ಯೋಗ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಮೇಘಶ್ರೀ ಶೆಟ್ಟಿ ಅವಳಿ ಚಿನ್ನದ ಪದಕ ಗಳಿಸಿದ್ದಾರೆ. ಅವರು ಕೊಡೆತ್ತೂರು ಕೆಜಿಬೆಟ್ಟು ದಯಾನಂದ ಶೆಟ್ಟಿ-ಕವಿತಾ ಶೆಟ್ಟಿ ದಂಪತಿಯ ಪುತ್ರಿ. ಇನ್ನು ಎರಡು ಚಿನ್ನದ ಪದಕ ಗಳಿಸಿರುವ ಮೇಘಶ್ರೀ ಶೆಟ್ಟಿ ಅವರಿಗೆ ಬಾರಿ ಮೆಚ್ಚುಗೆ ಸೂಚಿಸಲಾಗಿದೆ.

Image: Web
