ಮಂಡ್ಯ: ಉತ್ತರಭಾರತ ಮೂಲದ ಯುವಕನೊಬ್ಬ ಕೆಲವೇ ಸಮಯದಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದಿದೆ.
ಯುವಕನ ಹುಚ್ಚಾಟ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಒಮ್ಮೆ ಬ್ರಿಡ್ಜ್ ನಿಂದ ಕೆಳಗೆ ಹಾರಿ ವಿದ್ಯುತ್ ತಂತಿಗೆ ಸಿಲುಕಿದ್ದಾನೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಬದುಕುಳಿದಿದ್ದಾನೆ. ನಂತರ ಎಳೆನೀರು ವ್ಯಾಪಾರಿಯಿಂದ ಮಚ್ಚು ಕಸಿದುಕೊಂಡು ನಡು ರಸ್ತೆಯಲ್ಲಿ ತನ್ನನ್ನ ತಾನು ಕೊಚ್ಚಿಕೊಂಡಿದ್ದಾನೆ.
ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದೆ. ಯುವಕನ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ.ನತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ನ ಆಂಬುಲೆನ್ಸ್ ಮೂಲಕ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮಾನಸಿಕ ಅಸ್ವಸ್ಥನಂತೆ ಅರಚಾಡುತ್ತಿದ್ದನೆಂದು ಹೇಳಲಾಗಿದೆ. ನನಗೆ ಹೆಚ್ ಐವಿ ಕಾಯಿಲೆ ಇದೆ, ನಾನು ಸಾಯ್ತೀನಿ ಎಂದು ಕಿರುಚಾಡುತ್ತಿದ್ದನೆಂದು ಹೇಳಲಾಗಿದೆ.

