ಮಂಡ್ಯ: ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣ ಮಂಡ್ಯದ ನೆಹರು ನಗರದಲ್ಲಿ ನಡೆದಿದೆ.ಮನೆಯಲ್ಲಿ ತಾಯಿ ಹಾಗೂ ಮಗ ಮೃತದೇಹ ಪತ್ತೆಯಾಗಿದೆ.ಬಟ್ಟೆ ಅಂಗಡಿಯಲ್ಲಿ ತಂದೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ದಾರೆ.
ಪತ್ನಿ, ಮಗನನ್ನು ಉಸಿರುಗಟ್ಟಿಸಿ ಸಾಯಿಸಿ ಗಂಡ ಸಹ ನೇಣಿಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ತಂದೆ ಪ್ರಭಾಕರ್ (65), ಪತ್ನಿ ಜ್ಯೋತಿ (55), ಮಗ ಸಂತೋಷ್ (30) ಮೃತರು.ತಡರಾತ್ರಿ 3:30ರ ಸಮಯದಲ್ಲಿ ಪತ್ನಿ, ಮಗನನ್ನ ಕೊಲೆಗೈದು ತಾನೂ ನೇಣಿಗೆ ಶರಣಾಗಿರವ ಬಗ್ಗೆ ಶಂಕಿಸಲಾಗಿದೆ.
ಪತ್ನಿ ಜ್ಯೋತಿಯನ್ನ ವೇಲ್ನಿಂದ ಉಸಿರುಗಟ್ಟಿಸಿ ಸಾಯಿಸಿದ್ದ ಪ್ರಭಾಕರ್. ಈ ವೇಳೆ ಬಂದ ಮಗ ಸಂತೋಷ್ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದೆಂದು ಹೇಳಲಾಗಿದೆ.
ಒಂದೂವರೆ ತಿಂಗಳ ಹಿಂದಷ್ಟೇ ಮಗ ಸಂತೋಷ್ ಮದುವೆಯಾಗಿತ್ತು. ಸ್ವಂತ ಮಾವನಿಂದಲೇ ಗಂಡ ಮತ್ತು ಅತ್ತೆಯ ಕೊಲೆಯಾದ್ರು ಗಾಢ ನಿದ್ರೆಯಲ್ಲಿದ್ದ ಸೊಸೆಗೆ ತಿಳಿದಿಲ್ಲ.ಬೆಳಿಗ್ಗೆ ತಿಂಡಿ ರೆಡಿ ಮಾಡಿ, ಅತ್ತೆ ಎಬ್ಬಿಸಲು ರೂಂಗೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಸಾಲದ ಒತ್ತಡಕ್ಕೆ ಸಿಲುಕಿ ಪತ್ನಿ, ಮಗನನ್ನು ಸಾಯಿಸಿರುವುದಾಗಿ ಪ್ರಭಾಕರ್ ಡೆತ್ನೋಟ್ ಬರೆದಿದ್ದಾರೆ.ಬಟ್ಟೆ ವ್ಯಾಪಾರ ಮಾಡಿ ಬದುಕು ಸಾಗಿಸುತ್ತಿದ್ದ ಕುಟುಂಬ.ಸರ್ಕಾರ ಫ್ರೀ ಬಸ್ ಬಿಟ್ಟಿರುವುದು ವ್ಯಾಪಾರ ಕಮ್ಮಿಯಾಗಿತ್ತೆಂದು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸಾಲ ತೀರಿಸಲಾಗುತ್ತಿಲ್ಲ ಖಾಸಗಿ ಫೈನಾನ್ಸ್ಗಳಿಗೆ ಸಾಲ ಕಟ್ಟಿಲ್ಲ ಅಂದ್ರೆ ಮನೆ ಬಳಿ ಬರ್ತಾರೆ. ಸಾಲದ ಕಿರುಕುಳದಿಂದ ಮನನೊಂದಿರುವುದಾಗಿ ಡೆತ್ನೋಟ್ ನಲ್ಲಿ ಬರೆದಿದ್ದಾರೆ.

