ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕುಳದಿಂದ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಮೈಕ್ರೋ ಫೈನಾನ್ಸ್ ಕಚೇರಿ ಮುಂದೆಯೇ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.
ತಗಡಯ್ಯನದೊಡ್ಡಿ ಗ್ರಾಮದ ನಾಗರಾಜು(35) ಮೃತ ವ್ಯಕ್ತಿ. ಸೂರ್ಯೋದಯ ಎಂಬ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ 5 ಲಕ್ಷ ನಾಗರಾಜು ಸಾಲ ಮಾಡಿದ್ದರು. ರೇಷ್ಮೆ ಸಾಕಾಣಿಕೆಗಾಗಿ ಸಾಲ ಮಾಡಿದ್ದ ಎನ್ನಲಾಗ್ತಿದೆ. ಆದರೇ ಕೃಷಿಯಲ್ಲಿ ನಷ್ಟವಾಗಿ ಸಾಲದ ಕಂತು ನಾಗರಾಜು ಪಾವತಿಸಿಲ್ಲ. ಸಾಲ ಮರುಪಾವತಿಗೆ ಫೈನಾನ್ಸ್ ಸಿಬ್ಬಂದಿ ಒತ್ತಡ ಹಾಕಿದ್ದರು. ಸಾಲಕ್ಕೆ ಬೇಸತ್ತು ಜಮೀನಿನ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಳವಳ್ಳಿಯ ಸೂರ್ಯೋದಯ ಫೈನಾನ್ಸ್ ಕಂಪನಿ ಬಳಿಗೆ ಶವ ತಂದು ಪ್ರತಿಭಟನೆ ನಡೆಸಲಾಯಿತು. ಫೈನಾನ್ಸ್ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು. ಬಳಿಕ ಪ್ರತಿಭಟನಾಕಾರರು ಮನವೊಲಿಸಿ ಪೊಲೀಸರು ಅಂತ್ಯ ಸಂಸ್ಕಾರ ಮಾಡಿಸಿದರು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

