ಮಂಡ್ಯ: ಗೇಟ್ ಹಾರಿ ಮನೆ ಆವರಣಕ್ಕೆ ಚಿರತೆ ಪ್ರವೇಶಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆಯ ಹೊರ ಆವರಣದಲ್ಲಿ ಓಡಾಡಿರುವ ಚಿರತೆ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ. ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.

ವಸತಿ ಪ್ರದೇಶದಲ್ಲೇ ಚಿರತೆ ಸಂಚಾರ ಆತಂಕ ಹೆಚ್ಚಿಸಿದೆ.ಗ್ರಾಮದ ಶಿವಲಿಂಗಣ್ಣನವರ ಮಾದೇಗೌಡ ಎಂಬುವವರ ಮನೆ ಆವರಣದಲ್ಲಿ ಚಿರತೆ ಎಂಟ್ರಿ ಕೊಟ್ಟಿದೆ. ಕೂಡಲೇ ಬೋನ್ ಇರಿಸಿ ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.