ಮಂಡ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಿಂದ ಹಣ ಪಡೆದಿರುವುದು ಸಾಬೀತು ಮಾಡಿದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಬಹಿರಂಗವಾಗಿ ವೇದಿಕೆಯಲ್ಲಿ ಸವಾಲು ಹಾಕಿದ್ದಾರೆ.
ನುಡಿ ಹಬ್ಬದ ವೇದಿಕೆಯಲ್ಲೇ ಆಕ್ರೋಷ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ವಕ್ಷೇತ್ರದಲ್ಲೇ ಶಾಸಕ ಹೆಚ್.ಟಿ.ಮಂಜು ಆತ್ಮಹತ್ಯೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಬಳಿ ತಾನು ಹಣ ಪಡೆದಿರೋ ಬಗ್ಗೆ ಆಡಿಯೋ ತನಗೆ ಬಂದಿದೆ.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಆದರೆ ವಿರೋಧಿಗಳ ಆರೋಪದ ಸಾಬೀತಾಗಬೇಕು. ಆರೋಪವನ್ನ ಸಾಕ್ಷಿಸಮೇತ ಸಾಬೀತು ಮಾಡಿದರೆ ನಾನು ತಲೆ ಬೋಳಿಸಿ, ಕತ್ತೆಯಲ್ಲಿ ಮೆರವಣಿಗೆ ಮಾಡಿಸಿಕೊಳ್ಳುವೆ. ಅಲ್ಲದೇ ಸ್ವತಃ ನಾನೇ ಮನೆ ಬಾಗಿಲು ಹಾಕಿಕೊಂಡು ಒಂಟಿಯಾಗಿ ಚಾಕುವಿನಲ್ಲಿ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಹಿರಂಗ ವೇದಿಕೆಯಲ್ಲೇ ಸವಾಲು ಹಾಕಿದರು.

