ಮಂಡ್ಯ: ಎರಡು ಟಿಪ್ಪರ್ ಗಳು ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಟಿ.ಎಂ.ಹೊಸೂರು ಗೇಟ್ ಬಳಿ ನಡೆದಿದೆ. ಒಂದು ಟಿಪ್ಪರ್ ಹೋಟೆಲ್ ಒಳಗೆ ನುಗ್ಗಿದೆ. ಅದೃಷ್ಟವಶಾತ್ ಸ್ಥಳದಲ್ಲೇ ಇದ್ದ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಡ್ಯ ಕಡೆಯಿಂದ ಬರ್ತಿದ್ದ ಒಂದು ಟಿಪ್ಪರ್. ಟಿ.ಎಂ.ಹೊಸೂರಿಗೆ ಹೋಗಲು ಅಂಡರ್ ಪಾಸ್ ನಲ್ಲಿ ಬಂದ ಇನ್ನೊಂದು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಹೋಟೆಲ್ ಹಾಗೂ ಸ್ಥಳದಲ್ಲಿದ್ದ ಹತ್ತಾರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವೈಜ್ಞಾನಿಕ ಹಂಪ್ಸ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ನಡೆದಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

