ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿದೆ. ಮೆರವಣಿಗೆ ಮೇಲೆ ಸಿಸಿಟಿವಿ ಹದ್ದಿನ ಕಣ್ಣು ವ್ಯವಸ್ಥೆ ಮಾಡಲಾಗಿದೆ.
ಯಾತ್ರೆ ಮಾರ್ಗದುದ್ದಕ್ಕೂ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಗಳ ಅಳವಡಿಸಲಾಗಿದೆ. ಗಂಜಾಮ್ ನ ನಿಮಿಷಾಂಭ ದೇಗುಲದಿಂದ-ರಂಗನಾಥ ದೇಗುಲದವರೆಗೂ ಅಳವಡಿಸಲಾಗಿದೆ. ಎರಡು ಸಮುದಾಯದ ಜನರ ನಡುವೆ ಶಾಂತಿ-ಸೌಹಾರ್ಧ ಸಭೆ ನಡೆಸಲಾಗಿದೆ. ಟಿಪ್ಪು ಜಾಮೀಯಾ ಮಸೀದಿಗೆ ಬ್ಯಾರಿಕೇಡ್ ಹಾಕಿ ಭದ್ರತೆ ಏರ್ಪಡಿಸಲಾಗಿದೆ.

ಮಸೀದಿ ಬಳಿ ಡಿಎಆರ್, ಕೆಎಸ್ಆರ್ ಪಿ ತುಕಡಿ ಜೊತೆಗೆ ಭದ್ರತೆಗಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಸಂಕಿರ್ತನಾ ಯಾತ್ರೆಗೆ ಹಲವೆಡೆಯಿಂದ ಹನುಮ ಭಕ್ತರು ಆಗಮಿಸಲಿದ್ದಾರೆ.
ಮೂಡಲಬಾಗಿಲು ಆಂಜನೇಯ ದೇಗುಲ ಪುನರ್ ಪ್ರತಿಷ್ಠಾಪನೆಗಾಗಿ ಹಲವು ವರ್ಷಗಳಿಂದ ಸಂಕೀರ್ತನಾ ಯಾತ್ರೆ ನಡೆಯುತ್ತದೆ. ಟಿಪ್ಪು ಕಾಲದಲ್ಲಿ ಹನುಮ ದೇವಾಲಯವನ್ನು ಕೆಡವಿ ಆ ಜಾಗದಲ್ಲಿ ಮಸೀದಿ ನಿರ್ಮಾಣ ಆರೋಪ ಕೇಳಿಬಂದಿದೆ.

ಈ ಕಾರಣಕ್ಕಾಗಿ ಪಟ್ಟಣದಲ್ಲಿ ಹನುಮನ ಹೆಸರಲ್ಲಿ ಭಕ್ತರ ಹೋರಾಟ ನಡೆಯುತ್ತಿದೆ. ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೇಸರಿ ಬಂಟಿಂಗ್ಸ್, ಭಗವಾಧ್ವಜ, ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.

