ಮಂಡ್ಯ: ಸಾವಿನಲ್ಲೂ ಕುಟುಂಬವೊಂದು ಸಾರ್ಥಕತೆ ಮೆರೆದಿದೆ. ಅಪಘಾತದಲ್ಲಿ ಬ್ರೈನ್ ಡೆಡ್ ಆದ ಮೃತ ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ನೀತಿಮಂಗಲ ಗ್ರಾಮದ ರಘು (35) ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಜೂನ್ 26 ರಂದು ಮೃತ ರಘು ತನ್ನ ಊರಿನ ರಸ್ತೆ ಬದಿ ಹೋಗಬೇಕಾದರೆ ಹಿಂದೆಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಿನಿಂದ ಮೆದುಳು ನಿಷ್ಕ್ರಿಯಗೊಂಡಿತ್ತು. ಬ್ರೈನ್ ಡೆಡ್ ಆದ ಬಗ್ಗೆ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿದ್ದರು.

ಮೆದುಳು ನಿಷ್ಕ್ರಿಯ ಹಿನ್ನೆಲೆ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರಿಸಿದ್ದರು. ತನ್ನ ಮಗ ಸತ್ತರು 6-7 ಮಂದಿ ಬಾಳಿಗೆ ಆಸರೆಯಾಗುವ ಹಿನ್ನೆಲೆ ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ತಾನು ಸತ್ತರು 7 ಜನರ ಪಾಲಿಗೆ ಮೃತ ರಘು ಬೆಳಕಾಗಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅಂಗಾಂಗ ದಾನವಾಗಿದೆ. ಮಗನ ಸಾವಿನ ನೋವಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮರೆದ ರಘು ಕುಟುಂಬಸ್ಥರು.