ಮಂಡ್ಯ: ಜಮೀನಿನಲ್ಲಿ ಅಳವಡಿಸಲಾದ ಬೋರ್ ವೆಲ್ ಹಾಗೂ ಪಂಪ್ ಸೆಟ್ ಗಳ ಕೇಬಲ್ ಕಳವು ಮಾಡುತ್ತಿದ್ದ ಖದೀಮರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಮಂಡ್ಯ ಜಿಲ್ಲೆ ಉಪ್ಪರಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕಳ್ಳರನ್ನ ಕಂಬಕ್ಕೆ ಕಟ್ಟಿಹಾಕಿದ ಗ್ರಾಮಸ್ಥರು ಥಳಿಸಿದ್ದಾರೆ.

ತಂಗಳಗೆರೆ, ಉಪ್ಪರಕನಹಳ್ಳಿ, ದ್ಯಾಪಸಂದ್ರ ಗ್ರಾಮಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಕೇಬಲ್ ನೊಂದಿಗೆ ಮೂವರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಕೆರಗೋಡು ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.