ಶಿವಮೊಗ್ಗ: ನಗರದ ಜನತೆ ಬದಲಾವಣೆ ಬಯಸಿದ್ದಾರೆ – ಆಯನೂರು ಮಂಜುನಾಥ

ಶಿವಮೊಗ್ಗ: ಈಶ್ವರಪ್ಪ ಅವರ ಮನಃಸ್ಥಿತಿಯ, ಅವರದ್ದೇ ವೈಚಾರಿಕತೆಯ, ಸಿದ್ಧಾಂತದ ವ್ಯಕಿ ಚನ್ನಬಸಪ್ಪ ಎಂದು ಜೆಡಿ ಎಸ್ ಉಮೇದುವಾರ ಆಯನೂರು ಮಂಜುನಾಥ ಹೇಳಿದರು.

ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗಿಂತ ಹೆಚ್ಚೇ ಎನ್ನಬಹುದಾಧ, ತೋಚಿದಂತೆ ಮಾತನಾಡುವ ಬಿಜೆಪಿ ಉಮೇದುವಾರ ಚನ್ನಬಸಪ್ಪ. ಈಶ್ವರಪ್ಪ ಅವರ ತದ್ರೂಪ ಎನ್ನಬಹುದು. ಅವರನ್ನು ಘೋಷಿಸುವುದಾದರೆ ಇಷ್ಟು ದಿನ ಕಾಯುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.

ಶಿವಮೊಗ್ಗ ನಿಷೇಧಾಜ್ಞೆರಹಿತ ನಗರವಾಗಬೇಕು. ಶಾಂತಿ, ಸೌಹಾರ್ದತೆ, ಸಹಬಾಳ್ವೆ ನೆಲೆಸಬೇಕು. ಒಡೆದಿರುವ ಮನಸ್ಸಿಗೆ ಹೊಲಿಗೆ ಹಾಕುವ ಕೆಲಸ ಮಾಡುವೆ ಎಂದರು.

ನಾನು ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ನಗರದ ಜನತೆ ಬದಲಾವಣೆ ಬಯಸಿದ್ದಾರೆ. ಹೊಸ ರಾಜಕೀಯದ ನೀರು ಹರಿಯಬೇಕೆಂದು ಯೋಚಿಸಿದ್ದಾರೆ. ಈ ಎಲ್ಲ ಬದಲಾವಣೆಗೆ ಮುಕ್ತ ಮನಸ್ಸಿನಿಂದ ಜನ ತಯಾರಾಗಿದ್ದಾರೆ ಎಂದರು.

ಎಂ. ಶ್ರೀಕಾಂತ್, ಶಾರದಾ ಪೂರ್ಯಾ ನಾಯ್ಕ್, ರಾಮಕೃಷ್ಣ ಜತೆಗಿದ್ದರು.

Ashika S

Recent Posts

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

6 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

27 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

51 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

1 hour ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

2 hours ago