News Karnataka Kannada
Wednesday, May 01 2024
ಶಿವಮೊಗ್ಗ

ಶಿವಮೊಗ್ಗ: ಜಗಳ ಬಿಡಿಸಲು ಹೋದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿಗೆ ಜೈಲು ಶಿಕ್ಷೆ

Shimoga: Man sentenced to jail for fatally assaulting youth who went to settle a dispute
Photo Credit : By Author

ಶಿವಮೊಗ್ಗ: ದಿನಾಂಕಃ-24-09-2018 ರಂದು ಮಧ್ಯಾಹ್ನ ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಬಾಗಿ ಗ್ರಾಮದ ಚೇತನ್, 21 ವರ್ಷ ರವರ ದೊಡ್ಡಮ್ಮನೊಂದಿಗೆ ಶಿವರುದ್ರಪ್ಪ@ ಶಿವು ಎಂಬುವವನು ಹಳೆಯ ದ್ವೇಶದಿಂದ ಜಗಳ ಮಾಡುತ್ತಿದ್ದಾಗ, ಬಿಡಿಸಲು ಹೋದ ಚೇತನ್ ನಿಗೆ ಮನುಸಿಂಗ್ @ ಮನು ಎಂಬುವವನು ಮಚ್ಚಿನಿಂದ ತಲೆಗೆ ಮತ್ತು ಕೈಬೆರಳಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0291/2018 ಕಲಂ 354, 307, 504 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಆಗಿನ ತನಿಖಾಧಿಕಾರಿಗಳಾದ  ಭರತ್ ಕುಮಾರ್, ಡಿ ಆರ್, ಪಿಎಸ್ಐ ಭದ್ರಾವತಿ ಹಳೆನಗರ ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಪ್ರಕರಣದಲ್ಲಿ  ರತ್ನಮ್ಮ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ  ಆರ್. ವೈ. ಶಶಿಧರ ರವರು ದಿ:-18-01-2023 ರಂದು ಆರೋಪಿತನಾದ ಮನುಸಿಂಗ್ @ ಮನು ವಿರುದ್ಧ ಕಲಂ 307 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 04 ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 25,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು