News Karnataka Kannada
Monday, April 29 2024
ಶಿವಮೊಗ್ಗ

ಶಿವಮೊಗ್ಗ: ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ, ಹಳೆಯ ಅಧಿಸೂಚನೆಯನ್ನು ಮಾರ್ಪಡಿಸಿದ ಜಿಲ್ಲಾಧಿಕಾರಿ

Shiva
Photo Credit : By Author

ಶಿವಮೊಗ್ಗ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು, ವಯೋವೃದ್ದರು, ಮಹಿಳೆಯರು ಮಕ್ಕಳು ಓಡಾಡುವುದು ಕಷ್ಟವಾಗಿದೆ ಹಾಗೂ ಸರಕು ತುಂಬಿದ ಭಾರಿ ವಾಹನಗಳು ಬಂದಲ್ಲಿ ಅವುಗಳನ್ನು ತೆರವುಗೊಳಿಸಲು ಸಾಕಷ್ಟ ಸಮಯ ಬೇಕಾಗಿದ್ದು ಹಿಂದೆ ಬರುವ ಲಘು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಆದ್ದರಿಂದ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಮತ್ತು ಹಳೆಯ ಅಧಿಸೂಚನೆಯನ್ನು ಮಾರ್ಪಡಿಸಿ ಕೆಳಗಿನಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.

ಪಶ್ಚಿಮ ಮತ್ತು ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾಮ್ ಬಾಡಾದಿಂದ ಸೀಗೆಹಟ್ಟಿ, ಬಿಬಿ ಸ್ಟ್ರೀಟ್, ಆರ್‍ಎಸ್ ಪಾರ್ಕ್, ಕೋಟೆ ರಸ್ತೆ ಮೂಲಕ ಬೆಕ್ಕನಕಲ್ಮಠ ಸರ್ಕಲ್‍ವರೆಗೆ, ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್‍ನಿಂದ ವಿನೋಬನಗರ ಪೊಲೀಸ್ ಚೌಕಿವರೆಗೆ ಹಾಗೂ ಎನ್.ಟಿ.ರಸ್ತೆಯ ಸಂದೇಶ್ ಮೋಟಾರ್ಸ್ ಸರ್ಕಲ್‍ನಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಹೆಲಿಪ್ಯಾಡ್ ಸರ್ಕಲ್, ಆಯನೂರು ಗೇಟ್ ಮಾರ್ಗವಾಗಿ ಸಾಗರ ರಸ್ತೆಯ ಎಪಿಎಂಸಿ ಗೇಟ್‍ವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಮತ್ತು ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಮಹಾವೀರ ಸರ್ಕಲ್‍ನಿಂದ ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಉಷಾ ನರ್ಸಿಂಗ್ ಹೋಂ ಸರ್ಕಲ್‍ವರೆಗೆ, ಬಾಲರಾಜ್ ಅರಸ್ ರಸ್ತೆಯಲ್ಲಿ ಮಹಾವೀರ ಸರ್ಕಲ್‍ನಿಂದ ಕೆಇಬಿ ಸರ್ಕಲ್ ಸಿಗ್ನಲ್(ಸರ್ವಜ್ಞ ಸರ್ಕಲ್)ವರೆಗೆ ಹಾಗೂ ಬಿಹೆಚ್ ರಸ್ತೆಯಲ್ಲಿ ಅಮೀರ್ ಅಹಮದ್ ಸರ್ಕಲ್‍ನಿಂದ ಕರ್ನಾಟಕ ಸಂಘ ಸರ್ಕಲ್ ಮಾರ್ಗವಾಗಿ ಶಂಕರಮಠ ಸರ್ಕಲ್‍ವರೆಗೆ ಬೆಳಿಗ್ಗೆ 8 ರಿಂದ 11 ಗಂಟೆವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಮತ್ತು ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಹಳೆಯ ಅಧಿಸೂಚನೆಯ ಮಾರ್ಪಾಡು ಸಮಯ : ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ವೀರಶೈವ ಕಲ್ಯಾಣ ಮಂದಿರದಿಂದ ಗೋಪಿ ವೃತ್ತದವರೆಗೆ, ಬಿಹೆಚ್ ರಸ್ತೆಯಿಂದ(ಸರ್ ಎಂ.ವಿಶ್ವೇಶ್ವರಯ್ಯ ರಸ್ತೆ ಸಂಧಿಸುವ ಸ್ಥಳದಿಂದ) ಮಹಾವೀರ್ ವೃತ್ತದವರೆಗೆ, ಚರ್ಚ್ ವೃತ್ತದಿಂದ ಮಹಾವೀರ್ ವೃತ್ತದವರೆಗೆ ಮತ್ತು ಮಹಾವೀರ್ ವೃತ್ತದಿಂದ ಚರ್ಚ್ ವೃತ್ತದವರೆಗೆ, ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ, ಎಸ್‍ಎಂವಿ ರಸ್ತೆ ಮೂಲಕ ಬಿಹೆಚ್ ರಸ್ತೆಗೆ ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ ಹಾಗೂ ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ, ಗೋಪಿ ವೃತ್ತದಿಂದ ಮಹಾವೀರ್ ವೃತ್ತದವರೆಗೆ, ಬಾಲರಾಜ್ ಅರಸ್ ರಸ್ತೆಯ ಮೂಲಕ ಮತ್ತು ಗೋಪಿ ವೃತ್ತದಿಮದ ಎಎ ವೃತ್ತದವರೆಗೆ, ಎಎ ಸರ್ಕಲ್‍ನಿದ ಗೋಪಿ ವೃತ್ತದವರೆಗೆ ನೆಹರು ರಸ್ತೆಯಲ್ಲಿ ಹಾಗೂ ಸರ್‍ಎಂವಿ ರಸ್ತೆಯ ಮಹಾವೀರ್ ವೃತ್ತದಿಂದ ಬಸವೇಶ್ವರ ಸರ್ಕಲ್ ಮಾರ್ಗವಾಗಿ ಬಿಹೆಚ್ ರಸ್ತೆ ಸೇರುವ ಕಾನ್ವೆಂಟ್ ರಸ್ತೆ, ವೀರಭದ್ರೇಶ್ವರ ಚಿತ್ರಮಂದಿರ ರಸ್ತೆ, ಬಾಲರಾಜ್ ಅರಸ್ ರಸ್ತೆ ಸರ್ವಜ್ಞ ವೃತ್ತ(ಕೆಇಬಿ ಸರ್ಕಲ್)ದಿಂದ ಸರ್ಕಾರಿ ನೌಕರರ ಭವನದ ಬಡಾವಣೆ ರಸ್ತೆ ಹಾಗೂ ಅಶೋಕ ವೃತ್ತದಿಂದ ಎಎ ವೃತ್ತದವರೆಗೆ, ಹಳೇ ತೀರ್ಥಹಳ್ಳಿ ರಸ್ತೆಯ ಕೃಷಿ ಕಚೇರಿಯ ಕ್ರಾಸ್ ರಸ್ತೆಯಿಂದ ಎಎ ವೃತ್ತದವರೆಗೆ, ಕುವೆಂಪು ರಸ್ತೆಯಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಸರಕು ಸಾಗಣೆ ಮತ್ತು ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಸವಾರ್‍ಲೈನ್ ರಸ್ತೆಯ ಲಕ್ಷ್ಮಿ ಮೆಡಿಕಲ್ ಕ್ರಾಸ್‍ನಿಂದ ನೆಹರು ರಸ್ತೆವರೆಗೆ, ಗಾರ್ಡನ್ ಏರಿಯಾ 1,2 ಮತ್ತು 3 ನೇ ಕ್ರಾಸ್‍ಗಳಲ್ಲಿ ಎಲ್‍ಎಲ್‍ಆರ್ ರಸ್ತೆಯ ಗುಜರಿ ಅಂಗಡಿ ಕ್ರಾಸ್‍ನಿಂದ ಶೃಂಗಾರ್ ಷೋರೂಂವರೆಗೆ, ವಿನೋಬನಗರದ ಪೊಲೀಸ್ ಚೌಕಿಯಿಂದ ರೈಲ್ವೆಟ್ರ್ಯಾಕ್ ಕಡೆ ಹೋಗುವ ರಸ್ತೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಾಗೂ ವಿನೋಬನಗರ ಮೊದಲನೇ ಹಂತದ 6ನೇ ತಿರುವಿನಲ್ಲಿ ಸರಕು ಸಾಗಣೆ ಮತ್ತು ಭಾರಿ ವಾಹನಗಳ ಸಂಚಾರವನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಸರಕು ಸಾಗಣೆ ಮತ್ತು ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು