ಬಿಜೆಪಿಯಿಂದ ಈಶ್ವರಪ್ಪ ಉಚ್ಛಾಟನೆ ಬಳಿಕ ಚಿಹ್ನೆ ನೀಡಿದ ಚುನಾವಣ ಆಯೋಗ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಸೋಮವಾರ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಅವರು ಸೋಮವಾರ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.

ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕಣದಿಂದ ಹಿಂದೆ ಸರಿಯದ ಕಾರಣ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಾಮಪತ್ರ ವಾಪಸ್ ಪಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಯಾರೋಬ್ಬರ ಮನವಿಗೂ ಈಶ್ವರಪ್ಪ ಅವರು ಜಗ್ಗಲೇ ಇಲ್ಲ.

ಚುನಾವಣಾ ಆಯೋಗ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರಿಗೆ ಚುನಾವಣೆ ಚಿಹ್ನೆ ನೀಡಿದ್ದು, ”ಕೈ ಕಟ್ಟಿಕೊಂಡ ರೈತ ಮತ್ತು ಎರಡು ಕಬ್ಬುಗಳು” ಇರುವ ಚಿಹ್ನೆಯನ್ನು ನೀಡಲಾಗಿದೆ.

Nisarga K

Recent Posts

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

4 mins ago

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ

ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

8 mins ago

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

23 mins ago

ಪಲ್ಟಿಯಾದ ಲಾರಿಯಲ್ಲಿ 7 ಕೋ. ಹಣ ಪತ್ತೆ: ವಶಕ್ಕೆ ಪಡೆದ ಪೊಲೀಸರು

ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

38 mins ago

ಪುಸ್ತಕದಲ್ಲಿ ಬೈಬಲ್‌ ಪದ ಬಳಕೆ : ಕರೀನಾ ಕಪೂರ್‌ಗೆ ಕೋರ್ಟ್‌ ನೋಟಿಸ್‌

ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿದಂತೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ…

46 mins ago

ಭಯೋತ್ಪಾದಕ ಕೃತ್ಯದಲ್ಲಿ ಭಾಗಿ: ಉಗ್ರರ ಇಬ್ಬರು ಸಹಚರರ ಬಂಧನ

ಉಗ್ರರ ಇಬ್ಬರು ಸಹಚರರನ್ನು ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

60 mins ago