ಸ್ವದೇಶಿ ಮೇಳ ಉದ್ಘಾಟಿಸಿದ ಡಾ.ಶಿವಮೂರ್ತಿ ಶಿವಾಚಾರ್ಯ

ಶಿವಮೊಗ್ಗ: 1903 ರಲ್ಲಿ ಧರ್ಮದ ಆಧಾರದ‌ಮೇಲೆ ಬ್ರಿಟಿಷರು ದೇಶವನ್ನ ವಿಭಜಿಸಿದರು. 1905 ರಲ್ಲಿ ಕಲ್ಕತ್ತದ ಟೌನ್ ಹಾಲ್ ನಲ್ಲಿ ನಡೆದ ಸ್ವದೇಶಿ ಚಳುವಳಿಯನ್ನ ಇಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳ ನೆನಪಾಗಿಸುತ್ತಿದೆ. ಎಂದು ಸಿರಿಗಿರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು.

ಅವರು ನಗರದ ಫ್ರೀಡಂಗ ಪಾರ್ಕ್ ನಲ್ಲಿ ಇಂದಿನಿಂದ 5 ದಿನಗಳ ಕಾಲ ನಡೆಯುವ ಸ್ವದೇಶಿ ಮೇಳವನ್ನ ಉದ್ಘಾಟಿಸಿ ಮಾತನಾಡಿದರು. ಕೆಲವರಿಗೆ ನಮ್ಮ ದೇಶದ ಇತಿಹಾಸವೇ ತಿಳಿದಿಲ್ಲ.ರಾಣೇಬೆನ್ನೂರಿನ ಕೆಲ ಶಾಲಾ ಮಕ್ಕಳು ಚಿತ್ರದುರ್ಗದ ಕೋಟೆ ನೋಡಲು ಬಂದಾಗ ನಮ್ಮ ಮಠಕ್ಕೆ ಭೇಟಿ ನೀಡಿದ್ದರು.

ಮದಕರಿ ನಾಯಕನಿಗೂ ಓಬವ್ವಳಿಗೂ ಏನು ಸಂಬಂಧ ಎಂದು ಶಾಲಾ ಮಕ್ಕಳಿಗೆ ಕೇಳಿದ್ದೆ. ಆಗ ಒಂದು ಮಗು ಗಂಡ‌ ಹೆಂಡತಿ ಸಂಬಂಧ ಎಂದಿತ್ತು. ಇದು ಮಕ್ಕಳ ತಪ್ಪಲ್ಲ ಇದು ನಮ್ಮ‌ ಶಿಕ್ಷಣದ ವೈಫಲ್ಯವೆಂದು ದೂರಿದರು.

ಸ್ವದೇಶಿ ಮೇಳದಿಂದ ಪ್ರೇರಿತಗೊಂಡು ಮಹಿಳೆಯರು ನಾಳೆಯಿಂದ ಫ್ರಿಡ್ಜ್, ಕುಕ್ಕರ್,ಮಿಕ್ಸಿ ಬಳಕೆಯನ್ನ ತ್ಯಜಿಸಿ ಬೀಸೋಕಲ್ಲು, ಒನಕೆ ಬಳಸುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಬೀಸೋಕಲ್ಲು ಹಿಡಿದು ಅಡುಗೆ ಮಾಡ್ತೀರಿ ಎಂಬ ನಿರೀಕ್ಷೆ ಇಲ್ಲ. ಹಾಗಾಗಿ ಸ್ವದೇಶಿ ಮೇಳಕ್ಕೆ ಹೊಸ ಹೆಸರಿನ ಅವಶ್ಯಕತೆ ಇದೆ. ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಗಾಂಧೀಜಿ ಸ್ವದೇಶಿ ಎಂಬ ಪದ ಬಳಸಿದ್ದರು.

ಹಾಗಾಗಿ ಹೊಸ ಡೆಫ್ನೇಷನ್ ಬೇಕು. ನಮ್ಮ ವಸ್ತುವನ್ನ ಉತ್ಪಾದಿಸುವ ವಸ್ತುವನ್ನ ಭಾರತೀಯರೇ ಖರೀದಿಸುವಂತಾಗಬೇಕು. ಸ್ವದೇಶಿ ಕೇವಲ ವಸ್ತುವಲ್ಲ. ನಮ್ಮ ಧರ್ಮವನ್ನ ಪ್ರತಿನಿಧಿಸುವಂತಾಗಬೇಕು. ಸ್ವದೇಶಿ ಸಂಸ್ಕೃತಿಯನ್ನ ನಿರಂತರವಾಗಿ ಕಾಪಾಡಿಕೊಂಡು ಹೋಗುವುದು ಭಾರತೀಯನ ಕರ್ತವ್ಯ ಎಂದರು.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿ ಸ್ವದೇಶದ ವಸ್ತುಗಳ ಉತ್ತೇಚಿಸುತ್ತಿರುವ ಉದ್ದೇಶ ಸ್ವದೇಶ್ ಮೇಳ ಹಿಂದಿದೆ ಸ್ವದೇಶಿ ಆಂದೋಲನ ಸ್ವಾವಲಂಭನೆಯ ಚಳುವಳಿಯಾಗಿದೆ ಎಂದು  ತಿಳಿಸಿದರು.

ಸ್ವದೇಶಿಯನ್ನ‌ಗಾಂಧಿಜಿ ಆತ್ಮ ಸ್ವರಾಜ್ ಎಂದು ಬಣ್ಣಿಸಿದ್ದರು. ಬಟ್ಟೆ ಉತ್ಪಾದಿಸಿ ಸ್ವಾಲಂಭನೆಯ ಗ್ರಾಮ ಎಂದು ಗುರುತಿಸಬೇಕೆಂದು ಒತ್ತಾಯಿಸಿದರು. ಬಾಲಗಂಗಾಧರ್ ನಾಥ್ ತಿಲಕ್ ಮಣ್ಣಿನಿಂದ ಬಳಕೆಯಾಗುವ ವಸ್ತುಗಳನ್ನ ಉತ್ಪಾದಿಸಲು ಪ್ರೋತ್ಸಹಿಸಿದರು. ಸ್ವದೇಶಿ ಮೇಳಕ್ಕೆ ಬಂದವರು ಯಾವುದಾದರೂ ವಸ್ತುವನ್ನ ಖರೀದಿಸುವ ಮೂಲಕ ಮೂಲಕ ಉತ್ತೇಜನೆ ನೀಡಿ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ, ಎಂಎಲ್ ಸಿ ಡಿ.ಎಸ್.ಅರುಣ್, ಸಂಪನ್ಮೂಲ ವ್ಯಕ್ತಿಯಾಗಿ ಬಿ.ಎಂ.ಕುಮಾರಸ್ವಾಮಿ, ಸ್ವದೇಶಿ ಮೇಳದ ಆಯೋಜಕರಾದ ಡಾ.ಧನಂಜಯ ಸರ್ಜಿ, ಹರ್ಷ ಕಾಮತ್, ದತ್ತಾತ್ರಿ ಉಪಸ್ಥಿತರಿದ್ದರು.

Ashika S

Recent Posts

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

1 min ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

12 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

43 mins ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

52 mins ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

54 mins ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

1 hour ago