ಶಿವಮೊಗ್ಗ : ಸೆ.27ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ

ಶಿವಮೊಗ್ಗ: ಕೇಂದ್ರದ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ವಿರೋಧಿಸಿ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ ಶಿವಮೊಗ್ಗದಲ್ಲೂ ಬಂದ್ ಮಾಡಲಾಗುವುದು ಎಂದು ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ವಲಯವನ್ನೂ ಪರೋಕ್ಷವಾಗಿ ಖಾಸಗೀಕರಣ ಮಾಡಲು ಮುಂದಾಗಿದೆ. ಎಪಿಎಂಸಿ ದುರ್ಬಲಗೊಳಿಸಲಾಗಿದೆ. ಕೃಷಿ ಭೂಮಿ ಗುತ್ತಿಗೆ ವ್ಯವಸ್ಥೆ ಸರಿಯಲ್ಲ. ಉದಾರೀಕರಣ, ಜಾಗತೀಕರಣದ ದುಷ್ಪರಿಣಾಮವನ್ನು ಇಂದಿಗೂ ರೈತರು ಅನುಭವಿಸುತ್ತಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಎರಡನೇ ಸ್ವಾತಂತ್ರ್ಯದ ಚಳುವಳಿ ನಡೆಯುತ್ತಿದೆ. ಅದನ್ನು ನಾವು ಯಶಸ್ವಿಗೊಳಿಸಬೇಕಿದೆ ಎಂದರು.

ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ರೈತರ ಅಹಿಂಸಾತ್ಮಕ ಚಳವಳಿ ಐತಿಹಾಸಿಕವಾಗಿದೆ. 10 ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಈ ಹೋರಾಟವನ್ನು ಪ್ರಾಯೋಜಿತ ಎಂದಿರುವುದು ವಿಪರ್ಯಾಸ ಎಂದು ಆಕ್ಷೇಪಿಸಿದರು.

ಈಗ ರಾಜ್ಯದಲ್ಲಿರುವುದು ಪ್ರಾಯೋಜಿತ ಸರ್ಕಾರ. ಚಳವಳಿಯನ್ನು ದೂರುವ ಬದಲು ಸರಿಯಾದ ಆಡಳಿತ ನೀಡಲಿ ಎಂದ ಅವರು ಅಗತ್ಯ ವಸ್ತು ಕಾಯಿದೆ ತಿದ್ದುಪಡಿ ಮೂಲಕ ಬಡವರ ಅನ್ನದ ತಟ್ಟೆಗೆ ಕೈ ಹಾಕಲಾಗಿದೆ. ಇದನ್ನು ಸಹಿಸುವುದಿಲ್ಲ ಎಂದರು.

ಶಿವಮೊಗ್ಗವನ್ನು ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಬಂದ್ ಮಾಡಲಾಗುವುದು. ಕಾರ್ಮಿಕರು, ಆಟೋ ರಿಕ್ಷಾ, ಟ್ಯಾಕ್ಸಿ, ವರ್ತಕರು, ಬೆಳ್ಳಿ, ಬಂಗಾರ ತಯಾರಕರು, ಹೋಟೆಲ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು, ಖಾಸಗಿ ಬಸ್ ಮಾಲೀಕರು ಸೇರಿದಂತೆ ಅನೇಕ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.

ಕಿಸಾನ್ ಸಂಯುಕ್ತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ ಮಾತನಾಡಿ, ಇಂದು ಸಂಜೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ. ಕರಪತ್ರ ವಿತರಿಸಲಾಗುತ್ತದೆ ಎಂದು ಹೇಳಿದರು.

Sneha Gowda

Recent Posts

ವಿಮಾನ ನಿಲ್ದಾಣದಲ್ಲಿ 13.56 ಕೋಟಿ ಮೌಲ್ಯದ ಚಿನ್ನ ಜಪ್ತಿ : 11 ಪ್ರಯಾಣಿಕರ ಬಂಧನ

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ 13.56 ಕೋಟಿ ರೂ. ಮೌಲ್ಯದ 22.14 ಕೆಜಿ ಚಿನ್ನವನ್ನು…

1 min ago

ಬೈಕ್ ಗೆ ಬಸ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯ ಬರುವ ಅಣ್ಣಿಗೇರಿ ಸಮೀಪ ಕೊಂಡಿಕೊಪ್ಪ ಕ್ರಾಸ್‌ ಬಳಿ ಬಸ್‌ ಚಾಲಕ ರಾಂಗ್…

13 mins ago

ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

ಗಚ್ಚಿನಗಕಟ್ಟಿ ಕಾಲೋನಿಯಿಂದ ಭಾನುವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ…

19 mins ago

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕತ್ತೆ ಕಿರುಬ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕತ್ತೆ ಕಿರುಬ ( ಹೈನಾ ) ಶ್ವಾನ ಕಾಣಿಸಿಕೊಂಡಿದೆ.

29 mins ago

ಲೋಕಸಭಾ ಚುನಾವಣೆ : ಮತದಾರನಿಗೆ ಕಾಂಗ್ರೆಸ್​ ಶಾಸಕನಿಂದ ಕಪಾಳಮೋಕ್ಷ

ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ವೈಎಸ್​ಆರ್​ ಕಾಂಗ್ರೆಸ್​ನ ಶಾಸಕ ಎ ಶಿವಕುಮಾರ್ಮ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ…

36 mins ago

ಧರ್ಮ ಪಾಲನೆಯ ಅಸಡ್ಡೆಯೇ ಸಂಘರ್ಷಕ್ಕೆ ಕಾರಣ: ಪಿ.ಎ. ಹನೀಫ್

ಆಯಾ ಧರ್ಮಗಳು ಸಾರಿದ ತತ್ವ ಆದರ್ಶಗಳ ಪಾಲನೆ ಬಗೆಗಿನ ಜನರ ಅಸಡ್ಡೆಯೇ ಇಂದಿನ ಮನುಷ್ಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಸತ್ಯ,…

49 mins ago