News Karnataka Kannada
Tuesday, April 30 2024
ಶಿವಮೊಗ್ಗ

ಶಿವಮೊಗ್ಗ ನಗರದ ಈದ್ಗಾ ಮೈದಾನದಲ್ಲಿ ಇಂದು ಸುನ್ನಿ ಜಾಮಿಯಾತುಲ್ ಉಲೇಮಾ ಕಮಿಟಿ” ವತಿಯಿಂದ ಬೃಹತ್ ಸಮಾವೇಶ 

New Project (6)
Photo Credit :

ಶಿವಮೊಗ್ಗ  : ಈ ಸಮಾವೇಶಕ್ಕೆ ಮುಖ್ಯ ಕಾರಣ ತ್ರಿಪುರಾ ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ನಡೆದ ಅಹಿತಕರ ಘಟನೆಯನ್ನು ಖಂಡಿಸಿ ವಿಷಾದ ವ್ಯಕ್ತಪಡಿಸುವ ಕುರಿತು ಮತ್ತು ಶಿಯಾ ಪಂಗಡಕ್ಕೆ ಸೇರಿದ ವಸೀಮ್ ರಿಜ್ವಿ ಎಂಬ ವ್ಯಕ್ತಿ ಪ್ರವಾದಿ ಹಜರತ್ ಮೊಹಮ್ಮದ್ (ರ.ಅ)ರವರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿ ಸುನ್ನಿ ಪಂಗಡದ ಮುಸ್ಲಿಂ ಸಮುದಾಯದವರಿಗೆ ನಿಂದಿಸಿರುವ ಬಗ್ಗೆ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕೆಲವು ದಿನಗಳ ಹಿಂದೆ ತ್ರಿಪುರಾದ ಅಗರ್ತಲಾ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯ ಮತ್ತು ಅಹಿತಕರ ಘಟನೆಗಳು ನಡೆದಿರುವುದು ವಿಷಾದನೀಯ ಮತ್ತು ಅಸಹ್ಯಕರವಾದುದು. ಮನುಷ್ಯ ಕ್ರೂರನಾಗಬಾರದೆಂದೇ ಧರ್ಮಗಳು ಹುಟ್ಟಿವೆ ಧರ್ಮದ ಮೂಲ ಆಶಯ. ಮನುಷ್ಯರನ್ನು ಒಳ್ಳೆಯವರನ್ನಾಗಿ ಬೆಳೆಸುವುದು ಸನ್ಮಾರ್ಗಕ್ಕೆ ತರುವುದು ಆದರೆ ಧರ್ಮವನ್ನೇ ಮಾನವನ ಸಂಕುಚಿತ ಸರಪಳಿಯಿಂದ ಕಟ್ಟಿ ಹಾಕುತ್ತಿದ್ದಾನೆ ಹಾಗೆಯೇ ಸದ್ಭಾವನೆ ಕ್ಷೀಣಿಸಿ ದುರ್ಭಾವನೆಗಳನ್ನು ಹೆಚ್ಚಿಸುವತ್ತ ಗಮನ ನೀಡುತ್ತಿದ್ದಾನೆ.

ಆದ್ದರಿಂದ ತನ್ನ ಧರ್ಮ ಶ್ರೇಷ್ಠ ಇತರ ಧರ್ಮೀಯರ ಧರ್ಮ ನಿಕೃಷ್ಟ ಅನ್ನುವ ರೀತಿಯಲ್ಲಿ ಕೂಡ ವರ್ತಿಸುತ್ತಿದ್ದಾನೆಂದು ಈ ಸಂದರ್ಭದಲ್ಲಿ ಹೇಳಿದರು. ಮನೋವಿಕಾರ ವಿರುವ ಮನುಷ್ಯರಿಂದ ಈ ಕೃತ್ಯಗಳು ನಡೆದು ಸಮಾಜದ ಮಾನವೀಯ ಮೌಲ್ಯಗಳು ಕೆಳಸ್ತರದಲ್ಲಿ ಕುಸಿಯುವಂತೆ ಮಾಡುತ್ತಿದೆ ಧರ್ಮದ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಜಾತಿ ವಿಷದ ಬೀಜವನ್ನು ಬಿತ್ತಿ ಸಾಮರಸ್ಯವನ್ನು ಹಾಳು ಮಾಡಿ ಸಮಾಜವನ್ನು ಕೋಮುದಳ್ಳುರಿಗೆ ಎಡೆಮಾಡಿಕೊಡುತ್ತಿರುವುದು ಖಂಡನೀಯ ಎಂದು ತೀವ್ರವಾಗಿ ಖಂಡಿಸಿದರು. ನಮ್ಮ ಭಾರತ ಸರ್ವ ಜನಾಂಗದ ಶಾಂತಿ ಪ್ರೀತಿಯ ತೋಟವಾಗಿ ಬೆಳೆದು ಅಭಿವದ್ಧಿ ಪಥದತ್ತ ಸಾಗುವಂತೆ ಆಗಬೇಕಾದರೆ ಇಂತಹ ಕೃತ್ಯಗಳನ್ನು ಎಸಗುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಿ ಭಾರತದ ಪ್ರಜೆಗಳಾದ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದು ಹೇಳುತ್ತಿದ್ದಂತೆ ಎಲ್ಲರೂ ಒಕ್ಕೊರಲಿನಿಂದ ದ್ವನಿಗೂಡಿಸಿದರು.

ಶಿಯಾ ಪಂಗಡಕ್ಕೆ ಸೇರಿದ ವಸೀಮ್ ರಿಜ್ವಿ ಎಂಬಾತ ಪವಿತ್ರ ಕುರಾನಿನ ಬಗ್ಗೆ ಏನನ್ನೂ ಹರಿಯದೆ ಮಾತನಾಡುತ್ತಿರುವುದು ಹಾಗೂ ಅಪವಿತ್ರ ಪುಸ್ತಕವನ್ನು ಮುದ್ರಿಸಿ ಬಿಡುಗಡೆ ಮಾಡಿರುವುದು ಕೋಮುಭಾವನೆ ಕೆರಳಿಸುವ ಹೀನಾಯ ಕೃತ್ಯವಾಗಿರುತ್ತದೆ ಮತ್ತು ಭಾರತದಲ್ಲಿ ನಾವೆಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ ಇದಕ್ಕೆ ಸಾಕ್ಷಿಯಂತೆ ರಾಷ್ಟ್ರಕವಿ ಕುವೆಂಪುರವರ ನಾಣ್ನುಡಿಯಂತೆ ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದು ಮುಸ್ಲಿಂ ಕ್ರೈಸ್ತ ಪಾರ್ಸಿ ಜೈನರ ಉದ್ಯಾನವನ ಅನ್ನುವ ಅಮೂಲ್ಯ ತತ್ತ್ವಗಳನ್ನು ಆರಿಸಿಕೊಳ್ಳುವ ಸಹಬಾಳ್ವೆಯಿಂದ ಬಾಳುತ್ತಿರುವ ನಮ್ಮ ಭಾರತೀಯರಲ್ಲಿ ವಸೀಮ್ ರಿಜ್ವಿ ಅಂತಹ ಕಿಡಿಗೇಡಿ ಕೋಮುಭಾವನೆ ಮತ್ತು ಸಾಮರಸ್ಯವನ್ನು ಹಾಳು ಮಾಡುತ್ತಿರುವುದು ಖಂಡನೀಯ ಎಂದರು.

ಈ ಹಿಂದೆ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾಗಿ ಯು ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ ಎನ್ನುತ್ತ ಇಂಥ ವ್ಯಕ್ತಿಗಳ ವಿರುದ್ಧ ಕಾನೂನು ಅಂದೇ ಕ್ರಮ ಕೈಗೊಂಡಿದ್ದರೆ ಇಂಥ ಕೃತ್ಯಗಳು ನಡೆಯುತ್ತಿರಲಿಲ್ಲ ಆದ್ದರಿಂದ ತಾವುಗಳು ವಿಷಯವನ್ನು ಪರಿಶೀಲಿಸಿ ಸದರಿ ವ್ಯಕ್ತಿಯ ಮೇಲೆ ಕಠಿಣ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಈಗಾಗಲೇ ನೊಂದಿರುವ ಸುನ್ನಿ ಸಮುದಾಯದ ಮುಸಲ್ಮಾನರು ನೆಮ್ಮದಿಯಿಂದ ಬಾಳಲು ಅನುವು ಮಾಡಿಕೊಡಲು ಕೋರುತ್ತೇವೆ ಎಂದು ಮನವಿ ಪತ್ರ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ತ್ರಿಪುರಾ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಸ್ಲಿಂ ಮುಖಂಡರು ಭಾಷಣದ ಮದ್ಯದಲ್ಲಿ ಶಾಂತಿಯ ಬಗ್ಗೆ ಪ್ರಸ್ತಾಪಿಸಿ ನೆರೆದಿದ್ದ ಅಪಾರವಾದ ಜನಸ್ತೋಮಕ್ಕೆ ಮನವಿ ಮಾಡಿ ಸಹಕಾರ ಕೋರಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು