News Karnataka Kannada
Friday, May 03 2024
ಶಿವಮೊಗ್ಗ

ಗ್ರಾಮ ಪಂಚಾಯಿತಿ ಸದಸ್ಯರನ್ನು ಬಿಜೆಪಿ ಬೀದಿಗೆ ತಂದು ನಿಲ್ಲಿಸಿದೆ : ಮಧು ಬಂಗಾರಪ್ಪ

New Project (6)
Photo Credit :

ಶಿವಮೊಗ್ಗ: ಗ್ರಾಮ ಪಂಚಾಯಿತಿ ಸದಸ್ಯರನ್ನು ಬಿಜೆಪಿಯವರು ಬೀದಿಗೆ ತಂದು ನಿಲ್ಲಿಸಿದ್ದಾರೆ. ಹಾಗಾಗಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಗ್ರಾಮಪಂಚಾಯಿತಿಗಳ ಅಧಿಕಾರವನ್ನೇ ಮೊಟಕುಗೊಳಿಸಲಾಗಿದೆ. ಯಾವುದೇ ಸ್ವನಿರ್ಧಾರದ ಯೋಜನೆಗಳನ್ನು ಅವರು ಮಾಡುವಂತಿಲ್ಲ. ಅನುದಾನವನ್ನು ಕೂಡ ಹೆಚ್ಚು ಮಾಡಿಲ್ಲ. ಗ್ರಾಮಪಂಚಾಯಿತಿ ಸದಸ್ಯರ ವೇತನ ಕೂಡ ಹೆಚ್ಚು ಮಾಡಿಲ್ಲ. ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಡುತ್ತಿಲ್ಲ. ಬಿಜೆಪಿ ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿಯೇ ಮರಿಚಿಕೆಯಾಗಿದೆ. ಸರ್ಕಾರದ ಯೋಜನೆಗಳು ಕೂಡ ತಲುಪದೆ ಹೋಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಹದಗೆಟ್ಟಿದೆ. ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರು ಕೂಡ ಇದರಿಂದ ಬೇಸರಗೊಂಡಿದ್ದಾರೆ. ಒಟ್ಟಾರೆ ಜನರ ಭಾವನೆಗಳಿಗೆ ಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಗ್ರಾ.ಪಂ.ಸದಸ್ಯರಿಗೆ ಸಹಜವಾದ ಸಿಟ್ಟಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿಯ ಅಭ್ಯರ್ಥಿಗಳು ಈ ಭಾರಿ ಪರಿಷತ್ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಸೋಲು ಕಾಣಲಿದ್ದಾರೆ ಎಂದರು.

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಸರಳ ಸÀಜ್ಜನರಾಗಿದ್ದಾರೆ. ತಮ್ಮ ಕಳೆದ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ಅವರು ಗೆಲ್ಲುವುದು ಖಚಿತ ಅತ್ಯಂತ ಹೆಚ್ಚು ಅಂತರದಲ್ಲಿ ಅವರನ್ನು ಗಲ್ಲಿಸಬೇಕಾಗಿದೆ. ಈಗಾಗಲೇ ಅವರ ಪರ ದಾವಣಗೆರೆಯ ಮೂರು ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಪ್ರಚಾರ ಕಾರ್ಯ ಆರಂಭವಾಗಿದೆ. ಬಹುತೇಕ ಎಲ್ಲರು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಮುಖ್ಯವಾಗಿ ಜೆಡಿಎಸ್ ಬೆಂಬಲಿತ ಗ್ರಾ.ಪಂ.ಸದಸ್ಯರು ಕೂಡ ಈ ಬಾರಿ ಕಾಂಗ್ರೆಸ್ಗೆಷ ಬೆಂಬಲ ನೀಡಲಿದ್ದಾರೆ. ರಾಜ್ಯಮಟ್ಟದಲ್ಲಿ ಪಕ್ಷದ ಮುಖಂಡರುಗಳ ತೀರ್ಮಾನಗಳು ಏನೇ ಇದ್ದರೂ ಅದು ಸ್ಥಳೀಯವಾಗಿ ನಡೆಯುವುದಿಲ್ಲ. ಇಲ್ಲಿ ಸ್ಥಳೀಯ ಮತದಾರರದ್ದೇ ಅಂತಿಮ ನಿರ್ಧಾರವಾಗುತ್ತದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಗ್ರಾ.ಪಂ.ಮಟ್ಟದಲ್ಲಿ ಒಂದು ರೀತಿಯ ಮಾನಸಿಕ ಹೊಂದಾಣಿಕೆ ಇದೆ. ಜೆಡಿಎಸ್ ಬೆಂಬಲಿತ ಸದಸ್ಯರು ಬಿಜೆಪಿಯನ್ನು ಬೆಂಬಲಿಸುವುದು ಕಷ್ಟ ಸಾಧ್ಯ. ತಾವು ಸಹ ಈಗಾಗಲೇ ಜೆಡಿಎಸ್ನ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿದ್ದೇನೆ.

ಮುಂದಿನ ವೀಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. ಕಾಂಗ್ರೆಸ್ನ ಸಾಧನೆಗಳನ್ನು ಜನರಿಗೆ ತಲುಪಿಸುತ್ತೇವೆ. ಆ ಮೂಲಕವೇ ಮತ ಕೇಳುತ್ತೇವೆ. ಈ ಬಾರಿ ಆರ್.ಪ್ರಸನ್ನಕುಮಾರ್ ಅವರ ಗೆಲುವು ಖಚಿತ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಬಿ.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ವಿಜಯ್ಕುಸಮಾರ್, ಎಸ್.ಪಿ.ದಿನೇಶ್, ಜಿ.ಡಿ.ಮಂಜುನಾಥ್, ನಾಗರಾಜ್, ಶಿವಾನಂದ್, ದೇವಿಕುಮಾರ್ ಸೇರಿದಂತೆ ಹಲವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು