News Karnataka Kannada
Saturday, May 04 2024
ಶಿವಮೊಗ್ಗ

ಗ್ಯಾನ್‌ವಾಪಿ ಮಸೀದಿ: ಕೋರ್ಟ್ ನೀಡಿದ ಆದೇಶದ ವಿರುದ್ಧ ಎಸ್.ಡಿ.ಪಿ.ಐ ಪ್ರತಿಭಟನೆ

Gyanvapi
Photo Credit : News Kannada

ಶಿವಮೂಗ್ಗ: ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ ಒಂದು ಭಾಗವನ್ನು ಮುಚ್ಚಲು ಗೌರವಾನ್ವಿತ ವಾರಣಾಸಿ ನ್ಯಾಯಾಲಯ ನೀಡಿರುವ ಆದೇಶವು, ಆರಾಧನಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.

ಆರಾಧನಾ ಸ್ಥಳದ ಧಾರ್ಮಿಕ ಸ್ವರೂಪವು ಆಗಸ್ಟ್ 15, 1947 ರಂದು ಇದ್ದಂತೆಯೇ ಇರಬೇಕು ಹಾಗೂ ಯಾವುದೇ ಧಾರ್ಮಿಕ ಪಂಥದ ಪವಿತ್ರ ಸ್ಥಳವನ್ನು ಯಾರೂ ಇನ್ನೊಂದು ಪಂಗಡ ಅಥವಾ ವಿಭಾಗಕ್ಕೆ ಪರಿವರ್ತಿಸಬಾರದು ಎಂದು 1991ರ ಆರಾಧನಾ ಸ್ಥಳಗಳ ಕಾಯ್ದೆ ಪ್ರತಿಪಾದಿಸುತ್ತದೆ.

ಗ್ಯಾನ್‌ವಾಪಿ ಮಸೀದಿಗೆ ಸಂಬಂಧಿಸಿದ ವಿವಾದ ಹೊಸದೇನಲ್ಲ, ಆದರೆ ಇತರ ಧಾರ್ಮಿಕ ವಲಯಗಳು, ವಿಶೇಷವಾಗಿ ಮುಸ್ಲಿಮರು ನಿರ್ಮಿಸಿದ ಮತ್ತು ಅವರ ಒಡೆತನದಲ್ಲಿರುವ ಧಾರ್ಮಿಕ ಆರಾಧನಾ ಸ್ಥಳಗಳು ಮತ್ತು ಐತಿಹಾಸಿಕ ಸ್ಮಾರಕಗಳ ಮಾಲಿಕತ್ವವನ್ನು ನಾಶಪಡಿಸುವುದು ಅಥವಾ ಕಸಿದುಕೊಳ್ಳುವುದು ಆರ್.ಎಸ್.ಎಸ್. ಕಾರ್ಯಸೂಚಿಯ ಭಾಗವಾಗಿದೆ. ಸ್ವತಃ ಅವರೇ ಹೇಳಿಕೊಂಡಂತೆ, ಮುಸ್ಲಿಮರಿಂದ ವಶಪಡಿಸಿಕೊಳ್ಳಲು ಅಥವಾ ನೆಲಸಮಗೊಳಿಸಲು 3,000 ಮಸೀದಿಗಳ ಪಟ್ಟಿಯನ್ನು ತಯಾರುಗೊಳಿಸಿದ್ದಾರೆ. ಗ್ಯಾನ್‌ವಾಪಿ ಈ ಪಟ್ಟಿಯಲ್ಲಿನ ಎರಡನೇ ಮಸೀದಿಯಾಗಿದೆ. ಬಾಬರಿ ಮಸೀದಿ ಮೊದಲನೆಯದು.

ಬಾಬರಿ ಮಸೀದಿ ನೆಲಸಮಗೊಳಿಸಿದ ಅದೇ ಮಾದರಿಯನ್ನು ಗ್ಯಾನ್‌ವಾಪಿ ಮಸೀದಿಯ ವಿಷಯದಲ್ಲೂ ಅನುಸರಿಸಲಾಗುತ್ತಿದೆ. ‘ವಿದೇಶಿ’ ಧರ್ಮಗಳು ಮತ್ತು ಅವುಗಳ ಸಂಕೇತಗಳನ್ನು ನಾಶಪಡಿಸುವುದು ಮನುವಾದಿ ಹಿಂದುತ್ವ ರಾಷ್ಟ್ರದೆಡೆಗಿನ ಪ್ರಯಾಣದ ಪ್ರಮುಖ ಉದ್ದೇಶವಾಗಿದೆ. ಆದರೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದೇಶದ ಜಾತ್ಯಾತೀತ ಜನರ ಬೆಂಬಲದೊಂದಿಗೆ, ದೇಶದಲ್ಲಿ ಮಸೀದಿ ಧ್ವಂಸ ಮತ್ತು ಶಾಂತಿ ಕದಡುವ ಯಾವುದೇ ಕೃತ್ಯಗಳನ್ನು ಸೋಲಿಸಲಿದೆ.

ತೀವ್ರ ಬಲಪಂಥೀಯ ಹಿಂದುತ್ವ ಫ್ಯಾಸಿಸ್ಟರು 2014 ರಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಂದಿನಿಂದ ದೇಶದ ಸಂವಿಧಾನವನ್ನು ಮೂಲೆಗುಂಪಾಗಿಸಿದ್ದಾರೆ. 1991ರ ಆರಾಧನಾ ಸ್ಥಳಗಳ ಅಧಿನಿಯಮದಲ್ಲಿ ಕಲ್ಪಿಸಿದಂತೆ, ಮುಸ್ಲಿಂ ಆರಾಧನಾ ಸ್ಥಳಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರದಲ್ಲಿರುವ ತೀವ್ರಗಾಮಿಗಳು ಧನಾತ್ಮಕವಾಗಿ ಏನನ್ನಾದರೂ ಮಾಡುತ್ತಾರೆಂದು ನಿರೀಕ್ಷಿಸುವುದು ಮೂರ್ಖತನವಾಗಿದೆ. ಆದ್ದರಿಂದ, ದೇಶದ ನಾಗರಿಕರ ಶಾಂತಿಯುತ ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಘ ಪರಿವಾರ ದೇಶವನ್ನು ಮತ್ತಷ್ಟು ಹಾಳುಮಾಡದಂತೆ ಪ್ರತಿರೋಧಿಸಲು ಜಾತ್ಯಾತೀತ ಜನರು ಒಗ್ಗಟ್ಟಾಗಿ ಕೈಜೋಡಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು