News Karnataka Kannada
Friday, May 17 2024
ಚಿಕಮಗಳೂರು

ರಾಜ್ಯದಲ್ಲಿಯೇ ಮಾದರಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುತ್ತೇವೆ – ಸಿ.ಟಿ.ರವಿ

We will build model Ambedkar Bhavan in the state: CT Ravi
Photo Credit : News Kannada

ಚಿಕ್ಕಮಗಳೂರು : ರಾಜ್ಯಕ್ಕೆ ಮಾದರಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಶಾಸಕ ಸಿ.ಟಿ.ರವಿ ತಿಳಿಸಿದರು.
ಅವರು ನಗರದ ಬಿಜೆಪಿ ಕಛೇರಿಯಲ್ಲಿ ಎಸ್ಸಿ ಮೋರ್ಚಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ, ಜಾತಿ ಜಾತಿಗಳ ನಡುವೆ ಹೊಡೆದಾಡಿಸುವುದರ ಬದಲು ಕೂಡಿಸುವ ಕೆಲಸ ಮಾಡುತ್ತಿದ್ದೇವೆ, ವಿರೋಧ ಪಕ್ಷದವರು ಸಹ ಅಭಿವೃದ್ಧಿ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ಎಲ್ಲಾ ವರ್ಗದವರ ಅಭಿವೃದ್ಧಿಗೆ ಬಿಜೆಪಿ ಪಕ್ಷ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷದ ಕಾರ್ಯಕರ್ತರು ಕೆಲವು ಪ್ರಶ್ನೆಗಳನ್ನು ಕಾಂಗ್ರೆಸ್ಸಿಗರಿಗೆ ಕೇಳಬೇಕು, ೧೯೫೨, ೧೯೫೪ರ ಚುನಾ ವಣೆಯಲ್ಲಿ ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ ಪಾರ್ಟಿ ಯಾವುದು, ಮತ್ತು ಏಕೆ ಸೋಲಿಸಲಾ ಯಿತು, ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಏಕೆ ಕೊಡಲಿಲ್ಲ, ನ.೨೬ನ್ನು ಲಾ.ಡೇ (ಕಾನೂನು ದಿವಸ್) ಎಂದು ಕರೆಲ್ಪಡುತ್ತಿದ್ದ ದಿನವನ್ನು, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸಂವಿಧಾನವನ್ನು ಬರೆದು ಸಮರ್ಪಣೆ ಮಾಡಿದ ದಿನವನ್ನು ಸಂವಿಧಾನ ಗೌರವ ದಿವಸ್ ಎಂದು ಹೊಸ ಹೆಸರನ್ನು ಕೊಡಲಾಯಿತು, ಈ ಹೆಸರನ್ನು ನೀಡಿದ್ದು ಭಾರತೀಯ ಜನತಾ ಪಾರ್ಟಿ ಎಂದರು.

ತಮ್ಮ ಹಿಡೀ ಖಾನ್‌ದಾನ್‌ಗೆ ನೂರಾರು ಎಕರೆ ಜಾಗ ನೀಡಿದ ನೀವು, ಅಂಬೇಡ್ಕರ್ ಅವರಿಗಾಗಿ ದೆಹಲಿಯಲ್ಲಿ ಆರು ಅಡಿ ಜಾಗವನ್ನು ಏಕೆ ನೀಡಲಿಲ್ಲ, ಅಂಬೇಡ್ಕರ್ ಅವರ ಹೆಸರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಕೆಲವು ಏಜೆಂಟರುಗಳು ಎಸ್.ಟಿ.ಪಿ.ಐ ಪಿ.ಎಫ್.ವೈ ಜೊತೆ ಶಾಮಿಲಾಗಿದ್ದಾರೆ ಅಂತವರು ಅಂಬೇಡ್ಕರ್ ಅವರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ, ದೇಶದ ಹಿತಾಶಕ್ತಿಯನ್ನು ಎಂದೂ ಬಿಟ್ಟುಕೊಡದ ಅಂಬೇಡ್ಕರ್ ಅವರ ಸಮಾನತೆ ದೇಶ ಅಖಂಡವಾಗಲು ಕಾರಣವಾಗಿದೆ ಎಂದರು.

ಬಿಜೆಪಿ ಸಂವಿಧಾನ ಬದಲಾಯಿಸುತ್ತದೆ, ಅಂಬೇಡ್ಕರ್ ವಿರೋಧಿ ಮತ್ತು ಮೀಸಲಾತಿಯನ್ನು ತೆಗೆಯಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ, ಸಂವಿಧಾನಕ್ಕೆ ಹೆಚ್ಚು ಗೌರವ ನೀಡಿ ಸಂವಿದಾನ ಗೌರವ ದಿವಸ್ ಎಂದು ಆಚರಣೆಗೆ ತಂದದ್ದು ಬಿಜೆಪಿ ಬಂದ ಮೇಲೆ ಎಂಬ ವಾಸ್ತವಿಕ ಸತ್ಯ ತಿಳಿಯ ಬೇಕು, ಅವರ ಪಂಚದಾಮಗಳಾದ ಹುಟ್ಟಿದ ಸ್ಥಳ ಮಧ್ಯ ಪ್ರದೇಶದ ಮೊವ್, ಅಂತ್ಯ ಸಂಸ್ಕಾರ ಮುಂಬೈ, ಕರ್ಮಭೂಮಿ ನಾಗಪುರ, ಬ್ಯಾಡಿಸ್ಟರ್ ಪದವಿ ಲಂಡನ್, ಸಂವಿಧಾನ ಬರೆಯುವಾಗ ವಾಸವಿದ್ದ ದೆಹಲಿಯ ಆಲಿಪುರ್ ಈ ೫ ಜಾಗವನ್ನು ಪಂಚತೀರ್ಥ ಗಳಾಗಿ ಗುರುತಿಸಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಮಾಡಿದ್ದು ಬಿಜೆಪಿ ಸರ್ಕಾರ, ಹಲವು ಬಾರಿ ಸಂವಿಧಾನವನ್ನು ತಿದ್ದುಪಡಿ ತಂದ ಕಾಂಗ್ರೆಸ್ ಪಾರ್ಟಿ ಅದರ ಆಪಾದನೆಯನ್ನು ಬಿಜೆಪಿ ಪಾರ್ಟಿಮೇಲೆ ಹಾಕಲಾಗಿದೆ ಎಂದರು.

ಭಾರತದ ಅಭ್ಯುದಯವನ್ನು ಬಯಸುವ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ಜತೆಗೆ ಒಳಮೀಸಲಾತಿನ್ನು ನೀಡಲಾಗಿದೆ, ಭಾರತದ ದೊಡ್ಡ ವರ್ಗವಾದ ದಲಿತರನ್ನು ಹೊರಗಿಟ್ಟು ಭಾರತವನ್ನು ಕಟ್ಟಲು ಸಾದ್ಯವಿಲ್ಲ, ದಲಿತರು ಮುಂದೆ ಬಂದರೆ ಭಾರತವು ಮುಂದೆ ಬರುತ್ತದೆ, ಈ ಸತ್ಯದ ಅರಿವಿರುವ ಕಾರಣಕ್ಕೆ ನರೇಂದ್ರ ಮೋದಿಯವರು ಮುದ್ರಾ ಯೋಜನೆಯ ಜತೆಗೆ ಜನಧನ್ ಖಾತೆ, ಗ್ಯಾಸ್ ಕನೆಕ್ಷನ್, ವಿದ್ಯುತ್ ಸಂಪರ್ಕ, ಗರೀಬಿ ಕಲ್ಯಾಣ ಯೋಜನೆ ಯಂತಹ ಹಲವು ಯೋಜನೆಗಳನ್ನು ಜನರಿಗಾಗಿ ಜಾರಿಗೆ ತಂದರು, ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಕಾಶಿಯಲ್ಲಿ ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿ ಹಣೆಹಚ್ಚಿ ನಮಸ್ಕರಿಸುವ ಅವರು ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಗೌರವ ಕೊಡುವ ಪ್ರಧಾನ ಮಂತ್ರಿಗಳು ಇರುವುದು ನಮ್ಮ ಪುಣ್ಯ ಎಂದರು.

ನಾನು ಬಸವಣ್ಣ ರವರ, ಕನಕ ದಾಸರ, ಸರ್ವಜ್ಞರ, ಕುವೆಂಪು ರವರ, ಅಂಬೇಡ್ಕರ್ ರವರ, ಹಾಗೂ ಹಿಂದು ತತ್ವದ ಮೇಲೆ ನಂಬಿಕೆ ಇಟ್ಟು ಅಣ್ಣತಮ್ಮಂದಿರ ಭಾವನೆಯನ್ನು ಇಟ್ಟುಕೊಂಡು ವ್ಯಕ್ತಿಗೂ, ಜಾತಿಗು ಅನ್ಯಾಯ ಆಗದ ರೀತಿಯಲ್ಲಿ ಸಾಮಾಜಿಕ ನ್ಯಾಯ ಬದ್ಧತೆಯಿಂದ ರಾಜಕಾರಣ ಮಾಡುತ್ತಿದ್ದೇನೆ, ಎಲ್ಲಾ ಜಾತಿಯವರನ್ನು ಒಟ್ಟುಗೂಡಿಸಿ ನೀತಿ ಪರ ಕೆಲಸ ಮಾಡುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಉತ್ತರಖಂಡ್‌ನ ಭಾರತೀಯ ಜನತಾ ಪಾರ್ಟಿ ರಾಜ್ಯ ಉಪಾಧ್ಯಕ್ಷ ಶೈಲೇಂದ್ರ.ಬಿ.ಸಿಂಗ್, ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಮಾಜಿ ಸಿ.ಡಿ.ಎ ಅಧ್ಯಕ್ಷ ಕೋಟೆ ರಂಗನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಸದಸ್ಯರುಗಳಾದ ಅರುಣ್ ಕುಮಾರ್, ರವಿ, ಮುಖಂಡರುಗಳಾದ ಲಕ್ಷ್ಮಣನಾಯ್ಕ, ಹಂಪಯ್ಯ, ಜೆ.ಡಿ.ಲೋಕೇಶ್, ಹಿರಿಗಯ್ಯ, ಸುರೇಶ್, ಮೋಹನ್, ಅರುಣ, ಮಣಿಕಂಠ, ಕೊಲ್ಲಾಬಾವಿ ಅವಿನಾಶ್, ರಂಗಯ್ಯ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು